ಕಲಬುರಗಿ ಮತ್ತು ಜೇವರ್ಗಿ ತಾಲ್ಲೂಕು ಕೇಂದ್ರಗಳಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳಿಂದ ಹಿಜಾಬ್ ಬೆಂಬಲಿಸಿ ಪ್ರತಿಭಟನೆ
ಜಿಲ್ಲಾ ಕೇಂದ್ರ ಕಲಬುರಗಿಯಲ್ಲೂ ವಿವಿಧ ಮುಸ್ಲಿಂ ಸಂಘಟನೆಗಳು ಹಿಜಾಬ್ ಪರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವಾಗ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಯೂನಿಫಾರ್ಮ್ ಸಂಘರ್ಷ, (uniform row) ಹಿಜಾಬ್-ಕೇಸರಿ ಶಾಲು-ನೀಲಿ ಶಾಲು ವಿವಾದ ಅಕ್ಷರಶಃ ರಾಜ್ಯದ ಪ್ರತಿ ಮೂಲೆಗೆ ತಲುಪಿದೆ ಮತ್ತು ಪರ-ವಿರೋಧ ಪ್ರತಿಭಟನೆಗಳು ಎಲ್ಲಾ ಕಡೆ ನಡೆಯುತ್ತಿವೆ. ಬುಧವಾರದಂದು ಕಲಬುರಗಿಯ ಜೇವರ್ಗಿ ತಾಲ್ಲೂಕು ಕೇಂದ್ರದಲ್ಲಿ ಮುಸ್ಲಿಂ ಸಮುದಾಯದರು (Muslim community) ಶಾಲಾ ಕಾಲೇಜುಗಳಿಗೆ ಹೋಗುವ ತಮ್ಮ ಮಕ್ಕಳಿಗೆ ಹಿಜಾಬ್ ಧರಿಸಲು ತಡೆಯಬಾರದು ಎಂದು ಆಗ್ರಹಿಸಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ (Tipu Sultan Circle) ತಹಸೀಲ್ದಾರ್ ಕಚೇರಿಯವರೆಗೆ ಱಲಿ (Rally) ನಡೆಸಿದರು. ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ರ್ಯಾಲಿ ನಡೆಯುವಾಗ ಅವರು ಬಿಜೆಪಿ ಸರ್ಕಾರ ಮತ್ತು ಎಬಿವಿಪಿ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿಭಟನೆಕಾರರ ಕೈಯಲ್ಲಿ ಪ್ಲಕಾರ್ಡ್ ಸಹ ಇದ್ದವು. ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಸಮುದಾಯದವರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.
ಅತ್ತ ಜಿಲ್ಲಾ ಕೇಂದ್ರ ಕಲಬುರಗಿಯಲ್ಲೂ ವಿವಿಧ ಮುಸ್ಲಿಂ ಸಂಘಟನೆಗಳು ಹಿಜಾಬ್ ಪರ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವಾಗ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ಬುಧವಾರ ಪ್ರದರ್ಶನ ಪ್ರತಿಭಟನೆಗಳು ನಡೆದವು. ರಾಜ್ಯ ಹೈಕೋರ್ಟ್ ಇಂದು ತೀರ್ಪು ಪ್ರಕಟಿಸಿದ್ದರೆ ನಾಳೆಯಿಂದ ಪ್ರತಿಭಟನೆಗಳು ನಡೆಯುತ್ತಿರಲಿಲ್ಲ. ಅದರೆ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲಾಗಿದೆ.
ಅದು ರಚನೆಯಾಗಿ ವಿಚಾರಣೆ ನಡೆಸಿ ತೀರ್ಪು ಹೊರಬೀಳುವವರೆಗೆ ಸಮಯ ಹಿಡಿಯುತ್ತದೆ. ಅದರರ್ಥ ಪ್ರತಿಭಟನೆಗಳು ಕೊನೆಗೊಳ್ಳುವ ನಿರೀಕ್ಷೆ ಇಲ್ಲ.
ಇದನ್ನೂ ಓದಿ: Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆ