AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆ

ಹಿಜಾಬ್ ವಿವಾದದ ವಿಚಾರಣೆಗೆ ಪೂರ್ಣ ಪೀಠ ರಚನೆ ಮಾಡಲಾಗಿದೆ. ಹೈಕೋರ್ಟ್​ನಿಂದ ವಿಶೇಷ ಪೂರ್ಣ ಪೀಠ ರಚನೆ ಮಾಡಿ ಆದೇಶ ನೀಡಲಾಗಿದೆ. ನಾಳೆ (ಫೆಬ್ರವರಿ 10) ಮಧ್ಯಾಹ್ನ 2.30ಕ್ಕೆ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

Karnataka Hijab Row: ಹಿಜಾಬ್ ವಿವಾದದ ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠ ರಚನೆ
ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳು, ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು
TV9 Web
| Edited By: |

Updated on:Feb 09, 2022 | 9:06 PM

Share

ಬೆಂಗಳೂರು: ಹಿಜಾಬ್ ವಿವಾದದ ವಿಚಾರಣೆಗೆ ಪೂರ್ಣ ಪೀಠ ರಚನೆ ಮಾಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್. ದೀಕ್ಷಿತ್. ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್​ರ ಪೂರ್ಣ ಪೀಠ ರಚನೆ ಮಾಡಲಾಗಿದೆ. ಹೈಕೋರ್ಟ್​ನಿಂದ ವಿಶೇಷ ಪೂರ್ಣ ಪೀಠ ರಚನೆ ಮಾಡಿ ಆದೇಶ ನೀಡಲಾಗಿದೆ. ನಾಳೆ (ಫೆಬ್ರವರಿ 10) ಮಧ್ಯಾಹ್ನ 2.30ಕ್ಕೆ ಹಿಜಾಬ್ ವಿವಾದದ ಅರ್ಜಿ ವಿಚಾರಣೆ ನಡೆಯಲಿದೆ.

ಇಂದು (ಫೆಬ್ರವರಿ 9) ಹಿಜಾಬ್​​ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿತ್ತು. ವಿಸ್ತೃತ ಪೀಠ ರಚಿಸುವ ಬಗ್ಗೆ ಹೈಕೋರ್ಟ್ ಸಿಜೆ ತೀರ್ಮಾನಿಸಲಿ. ಈ ಪ್ರಕರಣ ವಿಸ್ತೃತ ಪೀಠದಲ್ಲಿ ವಿಚಾರಣೆಗೆ ಯೋಗ್ಯವಾಗಿದೆ. ಈ ಬಗ್ಗೆ ಹೈಕೋರ್ಟ್ ಸಿಜೆ ವಿವೇಚನಾಧಿಕಾರ ಹೊಂದಿದ್ದಾರೆ. ತಕ್ಷಣವೇ ಸಂಪೂರ್ಣ ಕಡತ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಿ ಎಂದು ಹೈಕೋರ್ಟ್ ರಿಜಿಸ್ಟ್ರಾರ್​​ಗೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದ್ದರು. ಅರ್ಜಿದಾರರು ಮುಂದಿನ ವಿಚಾರಣೆ ವೇಳೆ ಮನವಿ ಸಲ್ಲಿಸಬಹುದು. ಮಧ್ಯಂತರ ಆದೇಶದ ಬಗ್ಗೆ ಮನವಿ ಸಲ್ಲಿಸಬಹುದು ಎಂದು ಹೇಳಿದ್ದರು.

ಹಿಜಾಬ್​​ ಪ್ರಕರಣ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ಶಾಂತಿಯಿಂದ ಕೋರ್ಟ್​ನಿಂದ ತೆರಳಲು ವಕೀಲರಿಗೆ ಮನವಿ ಮಾಡಲಾಗಿದೆ. ನಿಮ್ಮ ವಾದಮಂಡನೆಯಿಂದ ನಮ್ಮ ಜ್ಞಾನ ವಿಸ್ತಾರವಾಗಿದೆ ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅಭಿಪ್ರಾಯ ತಿಳಿಸಿದ್ದಾರೆ. ಹಿಜಾಬ್​​ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ವರ್ಗಾವಣೆ ಹಿನ್ನೆಲೆ, ನಾವೆಲ್ಲರೂ ನ್ಯಾಯಮೂರ್ತಿಗಳಿಗೆ ತುಂಬಾ ಆಭಾರಿಯಾಗಿದ್ದೇವೆ. ಬಹಳ ತಾಳ್ಮೆಯಿಂದ ಅರ್ಥಪೂರ್ಣ ವಿಚಾರಣೆ ನಡೆಸಿದ್ದೀರಿ. ಸೌಹಾರ್ದತೆಯಿಂದ ವಾದಮಂಡಿಸಿದ ವಕೀಲರಿಗೆ ಅಭಿನಂದನೆ. ವಕೀಲರಾದ ದೇವದತ್ ಕಾಮತ್, ಸಂಜಯ್​​ ಹೆಗ್ಡೆ ಅಭಿನಂದನೆ ಸಲ್ಲಿಸಿದ್ದರು.

ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೃಷ್ಣಾ ಎಸ್​ ದೀಕ್ಷಿತ್​ ಅಭಿಪ್ರಾಯ ಪಟ್ಟಿದ್ದರು. ನೀವು ಒಪ್ಪಿದರೇ ವಿಸ್ತೃತ ಪೀಠಕ್ಕೆ ವಹಿಸುವೆ. ನಿನ್ನೆ ವಾದ ಮಾಡಿದ ಅಂಶಗಳು, ದಾಖಲೆ ಪರಿಶೀಲಿಸಿದ್ದೇನೆ ಎಂದು ಹೇಳಿದ್ದರು. ಹಿರಿಯ ವಕೀಲ ಸಂಜಯ ಹೆಗಡೆ ವಾದ ಮಂಡನೆ ಮಾಡಿ, ವಿಸ್ತೃತ ಪೀಠಕ್ಕೆ ವಹಿಸುವುದು ಕೋರ್ಟ್​ಗೆ ಬಿಟ್ಟ ವಿಚಾರ. ಆದರೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ 2 ತಿಂಗಳು ಮಾತ್ರ ಬಾಕಿ ಇದೆ ಎಂದು ಹೇಳಿದ್ದಾರೆ. ವಾದಿ ಪ್ರತಿವಾದಿಗಳ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್​ಗೆ ಅರ್ಜಿದಾರರ ಪರ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳ ವಿವೇಚನಾಧಿಕಾರ ಎಂದು ಹೇಳಿದ್ದರು.

ಎಜಿ ಪ್ರಭುಲಿಂಗ ನಾವದಗಿ ವಾದ ಮಂಡಿಸಿ ನಮಗೆ ಭಾವನಾತ್ಮಕ ವಿಷಯ ಇರಬಹುದು. ಆದರೆ ನಮಗೆ ತೀರ್ಪು ಬರುವುದು ಮುಖ್ಯ. ವಿಸ್ತೃತ ಪೀಠಕ್ಕೆ ವಹಿಸುವುದು ನ್ಯಾಯಮೂರ್ತಿಗಳಿಗೆ ಬಿಟ್ಟದ್ದು. ಧಾರ್ಮಿಕ ಅಗತ್ಯ, ಆಚರಣೆಯೇ ಎಂಬುವುದನ್ನ ನಿರ್ಧರಿಸಬೇಕಿದೆ. ಸರ್ಕಾರದ ಪರ ವಕೀಲ ಪ್ರಭುಲಿಂಗ ನಾವದಗಿ ವಾದ ಮಾಡಿದ್ದಾರೆ. ಎಲ್ಲರೂ ಕೂಡ ಕೋರ್ಟ್​​ ತೀರ್ಪಿಗೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಅರ್ಜಿದಾರರು ವಾದ ಮಂಡಿಸಿದ್ದಾರೆ. ಈಗ ಸರ್ಕಾರದ ಪರ ವಕೀಲರು ವಾದ ಮಂಡಿಸಬೇಕು ಎಂದು ಅರ್ಜಿದಾರ ವಿದ್ಯಾರ್ಥಿನಿ ಪರ ವಕೀಲ ಸಜ್ಜನ್​ ಪೂವಯ್ಯ ವಾದ ಮಂಡಿಸಿದ್ದಾರೆ. ಈ ಪ್ರಕರಣ ವಿಸ್ತೃತ ಪೀಠಕ್ಕೆ ವಹಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ

ಇದನ್ನೂ ಓದಿ: Karnataka Hijab Row: ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ; ಧರಣಿ, ಪ್ರತಿಭಟನೆ ನಡೆಸುವಂತಿಲ್ಲ

Published On - 8:36 pm, Wed, 9 February 22

ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಇಂದು ಈ ರಾಶಿಯವರ ಅನಿಸಿಕೆಗಳಿಗೆ ಫಲ ಸಿಗಲಿದೆ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
ಫ್ಯಾನ್ಸ್​ಗೆ ಸಿಹಿ ಸುದ್ದಿ ನೀಡಿ ಮನೆಗೆ ಮರಳಿದ ವಿರಾಟ್ ಕೊಹ್ಲಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
‘ಧುರಂಧರ್’ ಸಿನಿಮಾದ ಭಯಂಕರ ದೃಶ್ಯದ ಶೂಟಿಂಗ್ ಆಗಿದ್ದು ಹೀಗೆ.. ವಿಡಿಯೋ ನೋಡಿ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಹಾಲು ಖರೀದಿಸಲು ಬಂದ ಯುವಕನಿಗೆ ಭೀಕರ ಅಪಘಾತ; ಶಾಕಿಂಗ್ ವಿಡಿಯೋ ಇಲ್ಲಿದೆ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
ಹೊಸ ವರ್ಷದ ಪಾರ್ಟಿ ರೂಲ್ಸ್ ತಿಳಿಸಿದ ಬೆಂಗಳೂರು ಪೊಲೀಸ್ ಕಮಿಷನರ್
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು