ಕ್ಯಾಮೆರಾ ಮುಂದೆ, ಹಿಂದೆ ಎರಡೂ ಕಡೆ ನಟಿಸುತ್ತಿದ್ವಿ: ಹರಿಪ್ರಿಯಾ ಜೊತೆಗಿನ ಲವ್ ಸ್ಟೋರಿ ಬಗ್ಗೆ ವಸಿಷ್ಠ ಮಾತು

Vasishta Simha-Haripriya: ಪ್ರೇಮಿಸಿ ವಿವಾಹವಾದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹವಾದ ಬಳಿಕ ಇದೇ ಮೊದಲ ಬಾರಿ ಒಟ್ಟಿಗೆ ನಟಿಸುತ್ತಿದ್ದಾರೆ. ಆದರೆ ಮದುವೆಗೆ ಮುಂಚೆ ಒಟ್ಟಿಗೆ ನಟಿಸುವಾಗ ತಮಗೆ ಎಷ್ಟು ಕಷ್ಟವಾಗುತ್ತಿತ್ತು ಎಂದು ವಸಿಷ್ಠ ಹೇಳಿಕೊಂಡಿದ್ದಾರೆ.

ನಟಿ ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಇಬ್ಬರೂ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ. ಇಬ್ಬರೂ ಸ್ವತಃ ತಾವಾಗಿಯೇ ಘೋಷಿಸುವ ವರೆಗೆ ಬಹಳಷ್ಟು ಜನರಿಗೆ ಇವರ ಪ್ರೇಮಕಹಾನಿ ಗೊತ್ತೆ ಆಗಿರಲಿಲ್ಲ. ಮದುವೆ ಆದ ಬಳಿಕ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಒಟ್ಟಿಗೆ ಯದಾ ಯದಾ ಹಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ವಸಿಷ್ಠ ಸಿಂಹ, ಈ ಸಿನಿಮಾದ ನಿರ್ದೇಶಕರನ್ನು ಬಹಳ ಹಿಂದೆ ಹರಿಪ್ರಿಯಾ ಅವರೇ ರೆಕೆಮೆಂಡ್ ಮಾಡಿದ್ದರು ಎಂದರು. ಜೊತೆಗೆ ಮದುವೆಗೆ ಮುಂಚೆ ತಾವಿಬ್ಬರೂ ಒಟ್ಟಿಗೆ ನಟಿಸುವಾಗ, ಸೆಟ್​ನಲ್ಲಿ ತಾವು ಪ್ರೇಮಿಗಳು ಎಂದು ತೋರಿಸಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು, ಹೇಗೆ ಅದನ್ನು ಮೇಂಟೇನ್ ಮಾಡುತ್ತಿದ್ದೆವು ಎಂಬುದನ್ನೂ ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us