Hariprriya: ತೆಲಂಗಾಣಕ್ಕೆ ತೆರಳಿ ವಸಿಷ್ಠ ಸಿಂಹಗೆ ಡಬಲ್ ಸರ್ಪ್ರೈಸ್ ನೀಡಿದ ಹರಿಪ್ರಿಯಾ
ವಸಿಷ್ಠ ಸಿಂಹ ಅವರು ಮದುವೆ ಬಳಿಕ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ತೆಲಂಗಾಣಕ್ಕೆ ತೆರಳಿದ್ದರು. ಹರಿಪ್ರಿಯಾ ಅವರು ಅಲ್ಲಿಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಈ ಮೂಲಕ ಪತಿಗೆ ಅಚ್ಚರಿ ಮೂಡಿಸಿದ್ದಾರೆ.
Updated on:Mar 27, 2023 | 3:20 PM

ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಜನವರಿ 26ರಂದು ಮದುವೆ ಆದರು. ಇವರ ದಾಂಪತ್ಯ ಜೀವನಕ್ಕೆ ಈಗ ಎರಡು ತಿಂಗಳು. ಈ ಬಗ್ಗೆ ವಿಶೇಷ ಫೋಟೋಗಳನ್ನು ದಂಪತಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

ವಸಿಷ್ಠ ಸಿಂಹ ಅವರು ಮದುವೆ ಬಳಿಕ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಇದಕ್ಕಾಗಿ ಅವರು ತೆಲಂಗಾಣಕ್ಕೆ ತೆರಳಿದ್ದರು. ಹರಿಪ್ರಿಯಾ ಅವರು ಅಲ್ಲಿಗೆ ಸರ್ಪ್ರೈಸ್ ವಿಸಿಟ್ ಕೊಟ್ಟಿದ್ದಾರೆ. ಈ ಮೂಲಕ ಪತಿಗೆ ಅಚ್ಚರಿ ಮೂಡಿಸಿದ್ದಾರೆ.

ಇಷ್ಟೇ ಅಲ್ಲ ವಸಿಷ್ಠ ಸಿಂಹ ಹಾಗೂ ಅವರ ಸ್ಟಾಫ್ಗಳಿಗೆ ವಿಶೇಷ ಅಡುಗೆ ಮಾಡಿ ಉಣಬಡಿಸಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡು ವಸಿಷ್ಠ ಸಿಂಹ ಧನ್ಯವಾದ ಅರ್ಪಿಸಿದ್ದಾರೆ. ಈ ವಿಚಾರವನ್ನು ಅವರ ಫ್ಯಾನ್ಸ್ ಸಾಕಷ್ಟು ಇಷ್ಟಪಟ್ಟಿದ್ದಾರೆ.

ಹರಿಪ್ರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

ಇತ್ತೀಚೆಗೆ ಹರಿಪ್ರಿಯಾ ಅವರು ಯುಗಾದಿ ಹಬ್ಬವನ್ನು ವಸಿಷ್ಠ ಸಿಂಹ ಜೊತೆ ಅದ್ದೂರಿಯಾಗಿ ಆಚರಿಸಿದ್ದರು. ಮದುವೆ ಬಳಿಕ ಇದು ಮೊದಲ ಹಬ್ಬ ಎನ್ನುವ ಕಾರಣಕ್ಕೆ ಇವರಿಗೆ ಈ ಹಬ್ಬ ತುಂಬಾನೇ ಸ್ಪೆಷಲ್ ಆಗಿತ್ತು.
Published On - 9:32 am, Mon, 27 March 23