ರಿಷಬ್ ಶೆಟ್ಟಿ ಕಾಲು ಮುಟ್ಟಿ ನಮಸ್ಕರಿಸಿದ್ದೇಕೆ? ವಸಿಷ್ಠ ಸಿಂಹ ಕೊಟ್ಟರು ಉತ್ತರ

|

Updated on: Jun 09, 2024 | 2:06 PM

ಇತ್ತೀಚೆಗೆ ‘ಲವ್​ಲೀ’ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ರಿಷಬ್ ಶೆಟ್ಟಿ ಅವರ ಕಾಲಿಗೆ ವಸಿಷ್ಠ ಸಿಂಹ ನಮಸ್ಕರಿಸಿದರು. ವಸಿಷ್ಠ ಹೀಗೇಕೆ ಮಾಡಿದರು ಅಂದು ಸ್ವತಃ ಅವರೇ ವಿವರಿಸಿದ್ದಾರೆ.

ವಸಿಷ್ಠ ಸಿಂಹ (Vasishta Simha) ಹಾಗೂ ಸ್ಟೆಫಿ ಪಟೇಲ್ ನಟಿಸಿರುವ ‘ಲವ್ಲಿ’ ಸಿನಿಮಾದ ಟ್ರೈಲರ್ (Trailer) ಲಾಂಚ್ ಕಾರ್ಯಕ್ರಮ ಇತ್ತೀಚೆಗಷ್ಟೆ ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಕ್ಕೆ ಅತಿಥಿಯಾಗಿ ರಿಷಬ್ ಶೆಟ್ಟಿ ಆಗಮಿಸಿದ್ದರು. ಅವರೇ ಟ್ರೈಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ರಿಷಬ್ ಶೆಟ್ಟಿ ವೇದಿಕೆಗೆ ಆಗಮಿಸಿದಾಗ ನಟ ವಸಿಷ್ಠ ಸಿಂಹ, ರಿಷಬ್ ಶೆಟ್ಟಿಯ ಕಾಲು ಮುಟ್ಟಿ ನಮಸ್ಕರಿಸಿದರು. ಆದರೆ ರಿಷಬ್ ಶೆಟ್ಟಿ, ವಸಿಷ್ಠರನ್ನು ತಡೆದರು. ವಸಿಷ್ಠ ಹೀಗೇಕೆ ಮಾಡಿದರು ಎಂಬ ಅನುಮಾನ ಅಲ್ಲಿದ್ದವರಿಗೆ ಶುರುವಾಯ್ತು. ಬಳಿಕ ಟಿವಿ9 ಕನ್ನಡ ಜೊತೆಗೆ ಮಾತನಾಡಿದ ವಸಿಷ್ಠ ಸಿಂಹ, ತಾವೇಕೆ ಹಾಗೆ ಮಾಡಿದ್ದು ಎಂದು ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ