ಅತಿ ಚಿಕ್ಕ ವಯಸ್ಸಿನಲ್ಲೇ ಸಂಸದರಾದ ಸಾಗರ್ ಖಂಡ್ರೆ ಫಸ್ಟ್ ರಿಯಾಕ್ಷನ್
ಬೀದರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ದೇಶದ ಅತಿ ಕಿರಿಯ ಸಂಸದ ಸಾಗರ ಖಂಡ್ರೆ (26) ಅವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಯುವಕರು, ಉದ್ಯೋಗಕ್ಕಾಗಿ ಹೆಚ್ಚಿನ ಕೆಲಸ ಮಾಡುವೆ. ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಬರಬೇಕಿದೆ ಎಂದರು.
ದೆಹಲಿ, ಜೂನ್.09: ಅತಿ ಚಿಕ್ಕ ವಯಸ್ಸಿನಲ್ಲಿ ಗೆದ್ದು ಸಂಸದರಾದ ಸಾಗರ್ ಖಂಡ್ರೆ ದೆಹಲಿಯಲ್ಲಿ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೀದರ್ನಿಂದ ಗೆದ್ದು ಲೋಕಸಭೆಗೆ ಆಯ್ಕೆಯಾಗಿದ್ದು ಖುಷಿ ತಂದಿದೆ. ಜನರು ನಂಬಿಕೆ ಇಟ್ಟುಕೊಂಡು ನನ್ನನ್ನು ಆಯ್ಕೆ ಮಾಡಿದ್ದಾರೆ. 26ನೇ ವಯಸ್ಸಿನಲ್ಲೇ ನಾನು ಸಂಸದನಾಗಿ ಆಯ್ಕೆಯಾಗಿದ್ದೇನೆ. ಸಮಸ್ಯೆಗಳಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಕೇಂದ್ರದಿಂದ 5 ಲಕ್ಷ ಕೋಟಿ ತೆರಿಗೆ ಬರಬೇಕಾಗಿದೆ. ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಹೆಚ್ಚಿದೆ. ಈ ಬಗ್ಗೆ ಕೆಲಸ ಮಾಡ್ರೇವೆ ಎಂದು ಕಾಂಗ್ರೆಸ್ ಸಂಸದ ಸಾಗರ್ ಖಂಡ್ರೆ ತಿಳಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
Latest Videos