ನನಗೆ ಕೃಷಿ ಖಾತೆ ಸಿಕ್ಕರೆ ರೈತರಿಗಾಗಿ ಕೆಲಸ ಮಾಡುವೆ: ಹೆಚ್​ಡಿ ಕುಮಾರಸ್ವಾಮಿ

ನನಗೆ ಕೃಷಿ ಖಾತೆ ಸಿಕ್ಕರೆ ರೈತರಿಗಾಗಿ ಕೆಲಸ ಮಾಡುವೆ: ಹೆಚ್​ಡಿ ಕುಮಾರಸ್ವಾಮಿ

ವಿವೇಕ ಬಿರಾದಾರ
|

Updated on:Jun 09, 2024 | 11:25 AM

ನರೇಂದ್ರ ಮೋದಿಯವರು ಇಂದು (ಜೂ.09) ಸಂಜೆ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿಯವರ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಹೆಚ್​ ಡಿ ಕುಮಾರಸ್ವಾಮಿ ಅವರ ಪ್ರತಿಕ್ರಿಯೆ ಹೀಗಿದೆ.

ನರೇಂದ್ರ ಮೋದಿಯವರು (Narendra Modi) ಇಂದು (ಜೂ.04) ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನರೇಂದ್ರ ಮೋದಿಯವರ ಸಂಪುಟದಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವಕಾಶ ಸಿಗುವ ಸಾಧ್ಯತೆ ಇದೆ. ಈ ಬಗ್ಗೆ ಸ್ವತಃ ಹೆಚ್​ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದು, ನಮ್ಮ ಈ ಗೆಲುವು ಕರ್ನಾಟಕದ ಜನತೆಗೆ ಸಲ್ಲಬೇಕು. ನರೇಂದ್ರ ಮೋದಿ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮೋದಿಯವರ ನಂಬಿಕೆ ಉಳಿಸುವ ಕೆಲಸ ಮಾಡುತ್ತೇನೆ. ನನಗೆ ಮಂತ್ರಿ ಸ್ಥಾನ ಸಿಕ್ಕರೆ ಜನರಿಗಾಗಿ ಕೆಲಸ ಮಾಡುತ್ತೇನೆ. ಕೃಷಿ ಖಾತೆ ಸಿಕ್ಕರೆ ಸಂತೋಷ, ರೈತರಿಗಾಗಿ ಕೆಲಸಮಾಡುವ ಅವಕಾಶ ಸಿಗುತ್ತೆ. ರಾಜ್ಯದಲ್ಲಿ ಜೆಡಿಎಸ್​ಗೆ ಪುನಶ್ಚೇತನ ಸಿಕ್ಕಿದೆ. ಮೋದಿ ನೇತೃತ್ವದ ಸರ್ಕಾರ, ಕನ್ನಡಿಗರಿಂದ ಪುನಶ್ಚೇತನ ಸಿಕ್ಕಿದೆ. ವಿಶೇಷವಾಗಿ ನನ್ನ ಮಂಡ್ಯ ಕ್ಷೇತ್ರದ ಜನರಿಗೆ ಧನ್ಯವಾದ ಸಲ್ಲಿಸುವೆ ಎಂದು ಹೇಳಿದರು.

ಇದನ್ನೂ ಓದಿ: ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ: ಡಾ. ಮಂಜುನಾಥ್​​​​

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Jun 09, 2024 11:21 AM