ನಾಯಿಗಳಿಗೆ ಶಾಲು ಹೊದೆಸಿ ಸನ್ಮಾನ: ಬಿಬಿಎಂಪಿ ಕಚೇರಿ ಎದುರೇ ವಾಟಾಳ್ ವಿಭಿನ್ನ ಕಾರ್ಯಕ್ರಮ!

Updated By: Ganapathi Sharma

Updated on: Jul 15, 2025 | 10:11 AM

ಬೆಂಗಳೂರಿನ ಬೀದಿನಾಯಿಗಳಿಗೆ ಬಾಡೂಟ ಹಾಕುವ ಬಿಬಿಎಂಪಿಯ ನಡೆಗೆ ಜನರಿಂದ ಅಸಮಾಧಾನ ವ್ಯಕ್ತವಾಗ್ತಿದೆ. ಇತ್ತ ಕೋಟಿ ಕೋಟಿ ಹಣ ಮೀಸಲಿಟ್ಟು ಬೀದಿನಾಯಿಗಳಿಗೆ ಊಟ ಹಾಕೋಕೆ ಹೊರಟಿರೋ ಪಾಲಿಕೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ನಡೆಸೋ ಮೂಲಕ ವ್ಯಂಗ್ಯವಾಡಿದ್ದಾರೆ. ಪಾಲಿಕೆ ಕೇಂದ್ರ ಕಚೇರಿಯ ಮುಂದೆ ನಾಯಿಗಳನ್ನ ಕರೆತಂದ ವಾಟಾಳ್ ನಾಗರಾಜ್, ಬೀದಿನಾಯಿಗಳಿಗೆ ಬಿಸ್ಕೆಟ್ ತಿನ್ನಿಸಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ವಿಡಿಯೋ ಇಲ್ಲಿದೆ.

ಬೆಂಗಳೂರು, ಜುಲೈ 15: ಬೆಂಗಳೂರಿನಲ್ಲಿ ಬೀದಿನಾಯಿಗಳಿಗೆ ಬಾಡೂಟ ಹಾಕುವ ಪಾಲಿಕೆ ಯೋಜನೆಗೆ ವಿರೋಧ ವ್ಯಕ್ತವಾಗ್ತಿದೆ. ಆದರೆ, ಪಾಲಿಕೆ ನಡೆಯನ್ನು ವ್ಯಂಗ್ಯವಾಗಿ ಸ್ವಾಗತಿಸಿರುವ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್, ಬಿಬಿಎಂಪಿಯ ಕೇಂದ್ರ ಕಚೇರಿ ಮುಂದೆ ಸೋಮವಾರ ನಾಯಿಗಳಿಗೆ ಶಾಲು ಹೊದೆಸಿ, ಬಿಸ್ಕೆಟ್ ತಿನ್ನಿಸಿದರು. ಬೀದಿನಾಯಿಗಳಿಗೆ ಬಾಡೂಟ ಕೊಡಲು ಹೊರಟ ಪಾಲಿಕೆಗೆ ವ್ಯಂಗ್ಯರೀತಿಯಲ್ಲಿ ಅಭಿನಂದನೆ ಸಲ್ಲಿಸಿದ ವಾಟಾಳ್, ಒಂದು ವೇಳೆ ಸ್ವಲ್ಪ ದಿನ ಊಟ ನೀಡಿ ಮತ್ತೆ ಯೋಜನೆ ನಿಲ್ಲಿಸಿದರೆ ಪಾಲಿಕೆ ಕಚೇರಿಗೆ ಬೀದಿನಾಯಿಗಳನ್ನು ನುಗ್ಗಿಸಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆಯನ್ನೂ ನೀಡಿದರು. ಪಾಲಿಕೆ ಯೋಜನೆಗೆ ವಿರೋಧ ಇಲ್ಲ. ಆದರೆ ಸ್ವಲ್ಪ ದಿನ ಊಟ ಕೊಟ್ಟು ಸುಮ್ಮನಾದರೆ ಬೀದಿನಾಯಿಗಳು ಜನರ ಮೇಲೆ ದಾಳಿ ಮಾಡಬಹುದು ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ