ಯುಪಿಐ ಮೂಲಕ ಹಣ ಸ್ವೀಕರಿಸುವುದನ್ನು ನಿಲ್ಲಿಸಿದ ಅಂಗಡಿ ಮಾಲೀಕರು, ವ್ಯಾಪಾರದಲ್ಲಿ ಖೋತಾ; ಗ್ರಾಹಕರ ಪೀಕಲಾಟ

Updated on: Jul 21, 2025 | 12:21 PM

ಅಂಗಡಿ ಮಾಲೀಕರ ಸಮಸ್ಯೆಗಳು ಭಿನ್ನ. ಅವರಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆಯಿಂದ ಭಾರೀ ಮೊತ್ತದ ತೆರಿಗೆ ನೋಟೀಸ್​ಗಳು ಬರುತ್ತಿವೆ. ಈ ಅಂಗಡಿಯವರಿಗೆ ಇನ್ನೂ ನೋಟೀಸ್ ಬಂದಿಲ್ಲ ಅದರೆ ಬರುವ ಆತಂಕದಲ್ಲಿದ್ದಾರೆ. ಹಾಗಾಗೇ ಅವರು ನೋ ಯುಪಿಐ ಪೇಮೆಂಟ್, ಓನ್ಲಿ ಕ್ಯಾಶ್ ಎಂದು ತಾವೇ ಬರೆದು ಅಂಗಡಿಗೆ ಅಂಟಿಸಿದ್ದಾರೆ. ಜನರಿಗೆ ಇಷ್ಟೆಲ್ಲ ಸಮಸ್ಯೆಯಾಗುತ್ತಿದ್ದರೂ ಸರ್ಕಾರಗಳ ಮೌನ ಅಸಹನೀಯ.

ಬೆಂಗಳೂರು, ಜುಲೈ 21: ಟೀ ಸ್ಟಾಲ್, ಬೇಕರಿ ಮತ್ತು ಕಾಂಡಿಮೆಂಟ್ಸ್​ ಗಳ ಮಾಲೀಕರು ಮತ್ತು ಗ್ರಾಹಕರ ನಡುವೆ ಹಣ ಪಾವತಿ (payments) ವಿಷಯ ಪೀಕಲಾಟಕ್ಕಿಟ್ಟುಕೊಂಡಿದೆ. ನಗದು ಕೊಡಿ, ಯುಪಿಎ ಮೂಲಕ ಪೇಮೆಂಟ್ ತಗೊಳ್ಳಲ್ಲ ಅಂತ ಮಾಲೀಕರು ಹೇಳುತ್ತಿದ್ದರೆ ಗ್ರಾಹಕರ ಬಳಿ ಫೋನ್ ಗಳ ಮೂಲಕ ಹಣ ಪಾವತಿಸುವುದು ಬಿಟ್ಟರೆ ಬೇರೆ ಆಪ್ಷನ್ ಇಲ್ಲ. ನಮ್ಮ ಬೆಂಗಳೂರು ವರದಿಗಾರ ಗ್ರಾಹಕರು ಮತ್ತು ಮಾಲೀಕರು-ಎರಡೂ ಪಾರ್ಟಿಗಳನ್ನು ಮಾತಾಡಿಸಿದ್ದಾರೆ. ಗ್ರಾಹಕರು ಹೇಳೋದೇನೆಂದರೆ, ತಮಗೆ ಸಂಬಳ ಕೂಡ ಆನ್ಲೈನ್ ಮುಖಾಂತರವೇ ಸಿಗುತ್ತಿರುವಾಗ ಕ್ಯಾಶ್ ಎಲ್ಲಿಂದ ತರೋದು, ಎಟಿಎಂಗಳಿಗೆ ಹೋದರೂ ಬಹಳಷ್ಟು ಕಿಯಾಸ್ಕ್​ಗಳಲ್ಲಿ ಹಣ ಇರೋದಿಲ್ಲ, ಹಣ ಸಿಕ್ಕರೂ ₹ 500 ರ ನೋಟುಗಳು, ಒಂದು ಟೀ ಕುಡಿದು 500 ರೂ ಕೊಟ್ಟರೆ ಚಿಲ್ಲರೆ ಇಲ್ಲ ಅಂತ ಸ್ಟಾಲ್​​ನವರು ಹೇಳುತ್ತಾರೆ.

ಇದನ್ನೂ ಓದಿ:  ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ: ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಗುನ್ನ!

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ