AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SK Bhagavan: ಕನ್ನಡದಲ್ಲಿ ಮೊಟ್ಟಮೊದಲ ಬಾಂಡ್ ಶೈಲಿ ಸಿನಿಮಾ ತಯಾರಿಸಿದ ದೊರೆ-ಭಗವಾನ್ ಜೋಡಿಯ ಭಗವಾನ್ ಇನ್ನಿಲ್ಲ

SK Bhagavan: ಕನ್ನಡದಲ್ಲಿ ಮೊಟ್ಟಮೊದಲ ಬಾಂಡ್ ಶೈಲಿ ಸಿನಿಮಾ ತಯಾರಿಸಿದ ದೊರೆ-ಭಗವಾನ್ ಜೋಡಿಯ ಭಗವಾನ್ ಇನ್ನಿಲ್ಲ

ಅರುಣ್​ ಕುಮಾರ್​ ಬೆಳ್ಳಿ
| Edited By: |

Updated on:Feb 20, 2023 | 10:57 AM

Share

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಭಗವಾನ್ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ 6 ಗಂಟಗೆ ಅವರು ಕೊನೆಯುಸಿರೆಳೆದರು.

ಬೆಂಗಳೂರು: ಕರ್ನಾಟಕ ಖ್ಯಾತ ನಿರ್ದೇಶಕ ಮತ್ತು ದಿವಂಗತ ಡಾ ರಾಜ್ ಕುಮಾರ್ ಕುಟುಂಬದ ಅತ್ಯಂತ ಆಪ್ತರಾಗಿದ್ದ ಎಸ್ ಕೆ ಭಗವಾನ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಅವರಿಗೆ 90-ವರ್ಷ ವಯಸ್ಸಾಗಿತ್ತು. ಬಿ ದೊರೈರಾಜ್ ಮತ್ತು ಭಗವಾನ್ ಜೋಡಿ ಹಲವಾರು ಜನಪ್ರಿಯ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದೆ. ಕನ್ನಡದಲ್ಲಿ ಮೊಟ್ಟ ಮೊದಲ ಬಾಂಡ್ ಶೈಲಿಯ ಸಿನಿಮಾ (ಜೇಡರ ಬಲೆ, 1968, ಖ್ಯಾತ ಹಿಂದಿ ನಟಿ ರೇಖಾ ಅವರು ಡಾ ರಾಜ್ ನಾಯಕಿಯಾಗಿದ್ದರು) ತಯಾರಿಸಿದ ಶ್ರೇಯಸ್ಸು ದೊರೆ-ಭಗವಾನ್ ಗೆ ಸಲ್ಲುತ್ತದೆ. ದೊರೈರಾಜ್ 2000ರಲ್ಲಿ ವಿಧಿವಶರಾದರು. ಪುನೀತ್ ರಾಜಕುಮಾರ್ 2021ರಲ್ಲಿ ಆಕಸ್ಮಿಕವಾಗಿ ನಿಧನರಾದಾಗ ಭಗವಾನ್ ಆರೋಗ್ಯವಾಗಿದ್ದರು ಮತ್ತು ಅಪ್ಪು ಅಂತ್ಯ ಸಂಸ್ಕಾರನ್ನು ತಾವೇ ಮುಂದೆ ನಿಂತು ನೆರವೇರಿಸಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಭಗವಾನ್ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೋಮವಾರ ಬೆಳಗ್ಗೆ 6 ಗಂಟಗೆ ಅವರು ಕೊನೆಯುಸಿರೆಳೆದರು. ಸಹಕಾರನಗರದಲ್ಲಿರುವ ಮೃತರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Feb 20, 2023 10:53 AM