SL Bhyrappa Final Rites: ಮೈಸೂರಲ್ಲಿ ಹಿರಿಯ ಸಾಹಿತಿ ಎಸ್​​​ಎಲ್​​ ಭೈರಪ್ಪ ಅಂತ್ಯಕ್ರಿಯೆ ನೇರಪ್ರಸಾರ

Updated on: Sep 26, 2025 | 11:12 AM

ಇಂದು ಮೈಸೂರಿನ ಕಲಾಮಂದಿರದಲ್ಲೂ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ರವೀಂದ್ರ ಕಲಾಕ್ಷೇತ್ರದ ಬಳಿಕ ಮೈಸೂರಿಗೆ ಪಾರ್ಥಿವ ಶರೀರ ಸ್ಥಳಾಂತರಿಸಲಾಯ್ತು. ಗಣ್ಯರು, ಜನಸಾಮಾನ್ಯರ ದರ್ಶನಕ್ಕೆ ಬ್ಯಾರಿಕೇಡ್ ಅಳವಡಿಸಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದೇ ಅಂತ್ಯಕ್ರಿಯೆ ಕೂಡ ನಡೆಯಲಿದೆ. ನೇರಪ್ರಸಾರ ಇಲ್ಲಿದೆ.

ಮೈಸೂರು, ಸೆಪ್ಟೆಂಬರ್​ 26: ಕನ್ನಡದ ಮೇರು ಸಾಹಿತಿ, ಪರ್ವದ ಹರಿಕಾರ, ಗೃಹಭಂಗದ ಸೃಷ್ಟಿಕರ್ತ, ಸರಸ್ವತಿ ಪುತ್ರ ಎಸ್.ಎಲ್.ಭೈರಪ್ಪ ಯಾನ ಮುಗಿಸಿದ್ದಾರೆ. ಗುರುವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇಂದು ಮೈಸೂರಿನ ಕಲಾಮಂದಿರದಲ್ಲೂ ಭೈರಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದೇ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ನೇರಪ್ರಸಾರ ಇಲ್ಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.