ಬೆಂಗಳೂರು: ಲಾಂಗ್ ಬೀಸಿ 20 ವಾಹನಗಳ ಗ್ಲಾಸ್ ಪುಡಿಗಟ್ಟಿದ ಪುಂಡರು, ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಬೆಂಗಳೂರಿನ ಬ್ಯಾಡರಹಳ್ಳಿಯ ವಾಲ್ಮೀಕಿ ನಗರದಲ್ಲಿ ಹಾಗೂ ಸುಮಾರು ಮೂರ ರಿಂದ ನಾಲ್ಕು ಕಿಮಿ ವ್ಯಾಪ್ತಿಯಲ್ಲಿ ದಾಂಧಲೆ ಎಬ್ಬಿಸಿರುವ ರೌಡಿಗಳು, ಕಾರುಗಳು ಸೇರಿದಂತೆ ಸುಮಾರು 20 ವಾಹನಗಳ ಗಾಜುಗಳನ್ನು ಪುಡಿಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ವೈರಲ್ ಆಗುತ್ತಿದೆ. ವಿಡಿಯೋ ಇಲ್ಲಿದೆ.
ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ಬ್ಯಾಡರಹಳ್ಳಿಯ ವಾಲ್ಮೀಕಿ ನಗರದಲ್ಲಿ ಕುಡಿದ ಮತ್ತಿನಲ್ಲಿ ಲಾಂಗ್ ಬೀಸಿ 20 ವಾಹನಗಳ ಗ್ಲಾಸ್ ಪುಡಿಗಟ್ಟಿದ್ದಾರೆ. ರಸ್ತೆ ಬದಿ ಪಾರ್ಕ್ ಮಾಡಿದ್ದ ವಾಹನಗಳ ಮೇಲೆ ಎರ್ರಾಬಿರ್ರಿ ಲಾಂಗ್ ಬೀಸಿದ್ದಾರೆ. ಅಷ್ಟೇ ಅಲ್ಲದೆ, ಅನ್ನಪೂರ್ಣೇಶ್ವರಿ ನಗರದ ಮುದ್ದಿನಪಾಳ್ಯದ ಬಳಿ ಐದಾರು ವಾಹನಗಳ ಗ್ಲಾಸ್ಗಳನ್ನು ಒಡೆದುಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಘಟನೆಯ ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದೆ.
Published on: Sep 26, 2025 11:19 AM
Latest Videos
