ತುಮಕೂರು: ಮತ್ತೆ ಧರ್ಮ ದಂಗಲ್, ಚನ್ನಬಸವೇಶ್ವರ ಸ್ವಾಮಿ ಜಾತ್ರೆಯಲ್ಲಿ ಅನ್ಯಧರ್ಮದವರಿಗೆ ಅವಕಾಶ ನೀಡದಂತೆ ಡಿಸಿಗೆ ಮನವಿ
ಶ್ರೀ ಚನ್ನಬಸವೇಶ್ವರ ರಥೋತ್ಸವ ಜಾತ್ರೆ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಮುಜರಾಯಿ ವ್ಯಾಪ್ತಿಗೆ ಸೇರಿರುವ ಈ ದೇವಾಲಯದ ಆವರಣದಿಂದ 100 ಮೀಟರ್ ಒಳಗೆ ಯಾವುದೇ ಅನ್ಯಕೋಮಿನವರು ವ್ಯಾಪಾರ ಮಾಡಬಾರದೆಂದು ಮನವಿ ಮಾಡಲಾಗಿದೆ.
ತುಮಕೂರು: ಜಿಲ್ಲೆಯ ಗುಬ್ಬಿ ಜಾತ್ರೆಗೆ ಧರ್ಮ ದಂಗಲ್ ಬಿಸಿ ತಟ್ಟಿದೆ. ಗುಬ್ಬಿ ಪಟ್ಟಣದಲ್ಲಿ ನಡೆಯುವ ಚನ್ನಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅನ್ಯಧರ್ಮದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಆಗ್ರಹಿಸಿ ಡಿಸಿ ವೈ.ಎಸ್.ಪಾಟೀಲ್ಗೆ ವಿಹೆಚ್ಪಿ, ಬಜರಂಗ ದಳ ಮುಖಂಡರು ಮನವಿ ಸಲ್ಲಿಸಿದ್ದಾರೆ.
ಶ್ರೀ ಚನ್ನಬಸವೇಶ್ವರ ರಥೋತ್ಸವ ಜಾತ್ರೆ ಬಹಳ ಅದ್ದೂರಿಯಾಗಿ ನಡೆಯುತ್ತದೆ. ಮುಜರಾಯಿ ವ್ಯಾಪ್ತಿಗೆ ಸೇರಿರುವ ಈ ದೇವಾಲಯದ ಆವರಣದಿಂದ 100 ಮೀಟರ್ ಒಳಗೆ ಯಾವುದೇ ಅನ್ಯಕೋಮಿನವರು ವ್ಯಾಪಾರ ಮಾಡಬಾರದೆಂದು ಮನವಿ ಮಾಡಲಾಗಿದೆ. ಅನ್ಯಕೊಮಿನವರಿಗೆ ತಾವು ಅವಕಾಶ ಮಾಡಿಕೊಡಬಾರದು ಸರ್ಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಮುಖಂಡರು ಡಿಸಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ವ್ಯಾಪಾರ ಮಾಡಿದ್ರೆ ತಾವೇ ಹೋಗಿ ತಡೆಯುವುದಾಗಿ ಬಜರಂಗದಳ ಜಿಲ್ಲಾ ಮುಖಂಡ ಮಂಜು ಭಾರ್ಗವ್ ಎಚ್ಚರಿಕೆ ಕೊಟ್ಟಿದ್ದಾರೆ.
Published on: Feb 02, 2023 08:59 AM