Video: 46 ವರ್ಷಗಳ ಬಳಿಕ ಬಾಗಿಲು ತೆರೆದ ದೇವಾಲಯ, ಶಿವ, ಹನುಮಂತನಿಗೆ ಆರತಿ

|

Updated on: Dec 15, 2024 | 12:13 PM

ಸಂಭಾಲ್​ನ ದೀಪ ಸಾರಾಯಿಯಲ್ಲಿ 46 ವರ್ಷಗಳ ಬಳಿಕ ಶಿವ ಹಾಗೂ ಹನುಮಂತನಿರುವ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಆರತಿ ನೆರವೇರಿದೆ. ಈ ಪ್ರದೇಶದಲ್ಲಿ ವಿದ್ಯುತ್ ಕಳ್ಳತನವನ್ನು ಹಿಡಿಯಲು ಆಡಳಿತ ತಂಡ ತೆರಳಿದ್ದು, ಈ ವೇಳೆ ಈ ದೇವಸ್ಥಾನ ಪತ್ತೆಯಾಗಿದೆ. ದೇವಾಲಯದಲ್ಲಿ ದೇವರ ಹಲವು ವಿಗ್ರಹಗಳು ಕಂಡುಬಂದಿವೆ. ದಲ್ಲದೇ ಇಲ್ಲಿ ಪುರಾತನ ಬಾವಿಯೂ ಪತ್ತೆಯಾಗಿದೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ತೆರೆದಾಗ ಒಳಗೆ ಧೂಳು ತುಂಬಿಕೊಂಡಿರುವುದು ಕಂಡು ಬಂತು.  ಸ್ವತಃ ಪೊಲೀಸರೇ ತಮ್ಮ ಕೈಯಿಂದಲೇ ಶಿವಲಿಂಗ ಮತ್ತಿತರ ದೇವಾನುದೇವತೆಗಳ ಮೂರ್ತಿಗಳನ್ನು ಸ್ವಚ್ಛಗೊಳಿಸಿದರು.

ಸಂಭಾಲ್​ನ ದೀಪ ಸಾರಾಯಿಯಲ್ಲಿ 46 ವರ್ಷಗಳ ಬಳಿಕ ಶಿವ ಹಾಗೂ ಹನುಮಂತನಿರುವ ದೇವಾಲಯದ ಬಾಗಿಲು ತೆರೆಯಲಾಗಿದ್ದು, ಆರತಿ ನೆರವೇರಿದೆ. ಈ ಪ್ರದೇಶದಲ್ಲಿ ವಿದ್ಯುತ್ ಕಳ್ಳತನವನ್ನು ಹಿಡಿಯಲು ಆಡಳಿತ ತಂಡ ತೆರಳಿದ್ದು, ಈ ವೇಳೆ ಈ ದೇವಸ್ಥಾನ ಪತ್ತೆಯಾಗಿದೆ.

ದೇವಾಲಯದಲ್ಲಿ ದೇವರ ಹಲವು ವಿಗ್ರಹಗಳು ಕಂಡುಬಂದಿವೆ. ದಲ್ಲದೇ ಇಲ್ಲಿ ಪುರಾತನ ಬಾವಿಯೂ ಪತ್ತೆಯಾಗಿದೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ತೆರೆದಾಗ ಒಳಗೆ ಧೂಳು ತುಂಬಿಕೊಂಡಿರುವುದು ಕಂಡು ಬಂತು.  ಸ್ವತಃ ಪೊಲೀಸರೇ ತಮ್ಮ ಕೈಯಿಂದಲೇ ಶಿವಲಿಂಗ ಮತ್ತಿತರ ದೇವಾನುದೇವತೆಗಳ ಮೂರ್ತಿಗಳನ್ನು ಸ್ವಚ್ಛಗೊಳಿಸಿದರು. ಶಿವ, ನಂದಿ, ಹನುಮಾನ್ ಮತ್ತು ಕಾರ್ತಿಕೇಯನ ಪುರಾತನ ಪ್ರತಿಮೆಗಳು ಕಂಡುಬಂದಿವೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿರೀಶ್ ಚಂದ್ರ ಮಾತನಾಡಿ, ದೇವಸ್ಥಾನದ ಹೊರಭಾಗದಲ್ಲಿ ಬಾವಿ ಇದೆ. ಅಗೆಯುವಾಗ ಆ ಬಾವಿ ಸಿಕ್ಕಿತು. ಇನ್ನೂ ಅನೇಕ ಸಂಗತಿಗಳು ಕಾಣುತ್ತಿವೆ ಹೊರಬರುತ್ತಿವೆ ಎಂದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ