Video: ಆಟೋ ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ

|

Updated on: Jan 15, 2025 | 3:17 PM

ಮಹಿಳೆಯೊಬ್ಬರು ಆಟೋ ಚಾಲಕನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಣ ದರದ ಬಗ್ಗೆ ಇಬ್ಬರ ನಡುವೆಯೂ ವಾಗ್ವಾದ ಉಂಟಾಗಿತ್ತು. ಆತ ಕೆಟ್ಟ ಪದ ಬಳಸಿದ್ದಾನೆಂದು ಆರೋಪಿಸಿ ಮಹಿಳೆ ಆತನಿಗೆ ಥಳಿಸಿದ್ದಾಳೆ. ಅಂದಿನಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆಕೆ ಹೇಳಿದ್ದಾಳೆ.

ಮಹಿಳೆಯೊಬ್ಬರು ಆಟೋ ಚಾಲಕನನ್ನು ಹಿಗ್ಗಾಮುಗ್ಗಾ  ಥಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಪ್ರಯಾಣ ದರದ ಬಗ್ಗೆ ಇಬ್ಬರ ನಡುವೆಯೂ ವಾಗ್ವಾದ ಉಂಟಾಗಿತ್ತು. ಆತ ಕೆಟ್ಟ ಪದ ಬಳಸಿದ್ದಾನೆಂದು ಆರೋಪಿಸಿ ಮಹಿಳೆ ಆತನಿಗೆ ಥಳಿಸಿದ್ದಾಳೆ. ಅಂದಿನಿಂದ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆಕೆ ಹೇಳಿದ್ದಾಳೆ.

ಪ್ರಿಯಾಂಶಿ ಪಾಂಡೆ ಆಟೋ ಡ್ರೈವರ್ ವಿಮಲೇಶ್ ಕುಮಾರ್ ಶುಕ್ಲಾ ಅವರನ್ನು ನಿಂದಿಸುವಾಗ ಅವರ ಸೀಟಿನಿಂದ ಹೊರಗೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಕೈಮುಗಿದು ಬೇಡಿಕೊಂಡರೂ ಆಕೆ ಆತನಿಗೆ ಥಳಿಸುತ್ತಿದ್ದಳು ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.

ನಂತರ ಮಹಿಳೆ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ್ದಾಳೆ. ಇದು ವೈರಲ್ ಆದ ನಂತರ ಆಟೊ ಚಾಲಕ ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ನೀಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾನೆ. ಹಣ ಕೊಡಿ ಎಂದಿದ್ದಕ್ಕೆ ಆಕೆ ತನಗೆ ಹೊಡೆದಿದ್ದಾಳೆಂದು ಆತ ದೂರಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 15, 2025 03:17 PM