ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಿಟಿ ರವಿ ಕೆಟ್ಟ ಪದ ಬಳಸಿದ್ದರೆ ಅದು ಸರ್ವಾಥಾ ತಪ್ಪು: ರಮೇಶ್ ಜಾರಕಿಹೊಳಿ, ಶಾಸಕ
ಕೆಲವೊಂದು ವಿಷಯಗಳನ್ನು ಅಲ್ಲಲ್ಲಿಗೆ ಮೊಟಕುಗೊಳಿಸಬೇಕು, ಬೆಳೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ರಮೇಶ್ ಜಾರಕಿಹೊಳಿ, ಹಿಂದೆ ದಿವಂಗತ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಸಿಎಂ ಇಬ್ರಾಹಿಂ ಅವರು ಬಹಳ ಕೆಟ್ಟ ಪದಗಳನ್ನು ಬಳಸಿ ನಿಂದಿಸಿದ್ದರು, ಹಿಂದಿನ ರಾಜಕೀಯ ಸುದ್ದಿಗಳನ್ನು ಕೆದಕಿದರೆ ಅವೆಲ್ಲ ಸಿಗುತ್ತವೆ ಎಂದರು.
ಬೆಳಗಾವಿ: ಸಿಟಿ ರವಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ವಿಧಾನ ಪರಿಷತ್ ನಲ್ಲಿ ನಡೆದ ಮಾತಿನ ಜಗಳದ ಬಗ್ಗೆ
ಗೋಕಾಕ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸುಮಾರು ಒಂದೂವರೆ ತಿಂಗಳು ನಂತರ ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ಸಿಟಿ ರವಿ ಹಾಗೆ ಮಾತಾಡಿದ್ದು ತಪ್ಪು, ವಿಧಾನಸಭೆಯಲ್ಲಿ ಅಂಥ ಪದಗಳ ಬಳಕೆ ಸಲ್ಲದು, ರವಿ ತಾನು ಕೆಟ್ಟ ಶಬ್ಬ ಬಳಸಿಲ್ಲ ಎನ್ನುತ್ತಾರೆ ಅದರೆ ಅವರು ಬಳಸಿದ್ದು ನಿಜ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಅನ್ನುತ್ತಾರೆ, ಅವರು ಬಳಸಿದ್ದೇ ನಿಜವಾದರೆ ಅದು ತಪ್ಪು ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ಭ್ರಷ್ಟ, ಆತನ ನಾಯಕತ್ವಕ್ಕೆ ನನ್ನ ವಿರೋಧ; ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧವೇ ರಮೇಶ್ ಜಾರಕಿಹೊಳಿ ಕಿಡಿ
Latest Videos