ಮಹಾಕುಂಭದಲ್ಲಿ ಭಕ್ತಸಾಗರ; ಕಣ್ಸೆಳೆಯುತ್ತಿದೆ ವಿಹಂಗಮ ನೋಟ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳದ ಮೂರನೇ ದಿನವಾದ ಇಂದು ಬೆಳಿಗ್ಗೆ ಸಾವಿರಾರು ಭಕ್ತರು ತ್ರಿವೇಣಿ ಸಂಗಮದ ಘಾಟ್‌ಗಳಲ್ಲಿ ಮೂರು ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಈ ಮಧ್ಯೆ, ಮಹಾಕುಂಭದ 'ಅಮೃತ ಸ್ನಾನ'ದ ಮೊದಲ ದಿನವಾದ ಮಂಗಳವಾರ 3.5 ಕೋಟಿಗೂ ಹೆಚ್ಚು ಭಕ್ತರು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಂಗಳವಾರ ಸಂಜೆ ಅಮೃತ ಸ್ನಾನ ಮುಗಿದ ನಂತರ ಹೆಲಿಕಾಪ್ಟರ್‌ಗಳು ಭಕ್ತರ ಮೇಲೆ ಗುಲಾಬಿ ದಳಗಳನ್ನು ಸುರಿಸುತ್ತಿರುವುದು ಕಂಡುಬಂದಿದೆ.
ಪ್ರಯಾಗರಾಜ್: ಜನವರಿ 13ರಂದು ಪ್ರಾರಂಭವಾದ ಮಹಾಕುಂಭಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರಿವೇಣಿ ಸಂಗಮದ ತಟದಲ್ಲಿ ಭಕ್ತಸಾಗರ ನೆರೆದಿರುವ ವಿಡಿಯೋ ರೋಮಾಂಚನವನ್ನು ಉಂಟುಮಾಡುತ್ತಿದೆ. ಫೆಬ್ರವರಿ 26ರವರೆಗೆ ನಡೆಯಲಿರುವ ಈ ಮಹಾಕುಂಭ 2 ಲಕ್ಷ ಕೋಟಿ ಆದಾಯವನ್ನು ಗಳಿಸುವ ನಿರೀಕ್ಷೆಯಿದೆ. 45 ದಿನಗಳ ಅವಧಿಯಲ್ಲಿ ಸುಮಾರು 450 ಮಿಲಿಯನ್ ಭಕ್ತರನ್ನು ಸೆಳೆಯುವ ನಿರೀಕ್ಷೆಯಿರುವ ಮಹಾಕುಂಭವು ವಿಶೇಷವಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಆರ್ಥಿಕತೆಯ ಅಭಿವೃದ್ಧಿಗೂ ಸಹಾಯಕವಾಗಲಿದೆ.
ಉತ್ತರ ಪ್ರದೇಶ ಸರ್ಕಾರವು ಮಹಾಕುಂಭದ ಧಾರ್ಮಿಕ ಕಾರ್ಯಕ್ರಮಗಳಿಗೆ ಸುಮಾರು 7,500 ಕೋಟಿ ರೂ. ಖರ್ಚು ಮಾಡಿದೆ. ಭಾರತದ ವಿವಿಧ ರಾಜ್ಯಗಳ ಭಕ್ತರು ಮಾತ್ರವಲ್ಲದೆ ಬೇರೆ ದೇಶಗಳಿಂದಲೂ ಭಕ್ತರ ದಂಡು ಹರಿದುಬರುತ್ತಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos