ಸಿಎಂ ಸೀಟು 2028ರವರೆಗೆ ಭದ್ರವಾಗಿದೆ ಅದಕ್ಕಾಗಿ ಯಾವ ರೇಸೂ ನಡೆಯುತ್ತಿಲ್ಲ: ಹೆಚ್ ಸಿ ಮಹದೇವಪ್ಪ

ಸಿಎಂ ಸೀಟು 2028ರವರೆಗೆ ಭದ್ರವಾಗಿದೆ ಅದಕ್ಕಾಗಿ ಯಾವ ರೇಸೂ ನಡೆಯುತ್ತಿಲ್ಲ: ಹೆಚ್ ಸಿ ಮಹದೇವಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2025 | 5:30 PM

ದೇವರಾಜ್ ಮಾರ್ಕೆಟ್ ಬೀಳಿಸಿ ಹೊಸದಾಗಿ ನಿರ್ಮಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಮಹದೇವಪ್ಪ, ಕಟ್ಟಡ ಶಿಥಿಲಗೊಂಡಿದೆ ಮತ್ತು ಡೆಮಾಲಿಶ್ ಮಾಡಿ ಅಂತ ನ್ಯಾಯಾಲಯ ಸಹ ಹೇಳಿದೆ, ತಾವು ವೈಯಕ್ತಿಕವಾಗಿ ಭೇಟಿ ನೀಡಿ ಕಟ್ಟಡ ಒಂದೆರಡು ಕಡೆ ಕುಸಿದಿರುವುದನ್ನು ಗಮನಿಸಿದ್ದಾಗಿದೆ, ಸರ್ಕಾರಕ್ಕೆ ಜನರ ಪ್ರಾಣ ಮುಖ್ಯ, ತಾಂತ್ರಿಕ ಸಮಿತಿ ನೀಡುವ ವರದಿಯ ಮೇಲೆ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಹೇಳಿದರು.

ಮೈಸೂರು: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಯಾವ ರೇಸೂ ನಡೀತಿಲ್ಲ, ರೇಸ್​​ಗಳೆಲ್ಲ ನಡೆದು ಹೋಗಿವೆ, 2028 ರವರೆಗೆ ಸಿಎಂ ಕುರ್ಚಿ ಭದ್ರವಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು. ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷನ ನೇಮಕಾತಿ ಎರಡೂ ಹೈಕಮಾಂಡ್ ಮಟ್ಟದಲ್ಲಿ ನಡೆಯಲಿರುವ ಚರ್ಚೆಗಳು, ಇವರೆಡರ ಬಗ್ಗೆ ವಿರೋಧ ಪಕ್ಷದವರು ಮಾತಾಡುತ್ತಿರುತ್ತಾರೆ, ಯಾಕೆಂದರೆ ಸಂವೈಧಾನಿಕವಾಗಿ ಮಾತಾಡಲು ಅವರಲ್ಲಿ ಏನೂ ಇಲ್ಲ ಎಂದು ಅವರು ಹೇಳಿದರು. ಸಿಎಂ ಸ್ಥಾನಕ್ಕೆ ಹೈಕಮಾಂಡ್ ಮಹದೇವಪ್ಪರ ಹೆಸರನ್ನು ಪರಿಗಣಿಸಿದರೆ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಿದ್ದಾರಾ ಎಂದು ಕೇಳಿದ ಪ್ರಶ್ನೆಗೆ ಅವರು ನಗುತ್ತಾ 2028ರವರೆಗಂತೂ ಅದು ಸಾಧ್ಯವಿಲ್ಲ, ಅದಾದ ನಂತರ ನೋಡೋಣ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು, ಪರಮೇಶ್ವರ್ ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿಲ್ಲ, ಮೀಟಿಂಗ್​ಗಳ ಬಗ್ಗೆ ಅನಗತ್ಯ ಗೊಂದಲ ಬೇಡ: ಮಹದೇವಪ್ಪ