Video: ಬೈಕ್​ ಸವಾರನ ದುರ್ವತನೆ: ಚಲಿಸುತಿದ್ದ ಕಾರು​ ಮಿರರ್ ಹೊಡೆದು ಪರಾರಿ: ಎಫ್​​ಐಆರ್ ದಾಖಲು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2023 | 9:44 PM

ಚಲಿಸುತಿದ್ದ ಕಾರಿನ ಮಿರರ್​ಗೆ ಹೊಡೆದು ಬೈಕ್ ಸವಾರನೋರ್ವ ದುರ್ವತನೆ ತೋರಿರುವಂತಹ ಘಟನೆ ಕನಕಪುರ ಮುಖ್ಯರಸ್ತೆಯಲ್ಲಿ ನ. 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೆ ಸಂಚಾರಿ ಪೊಲೀಸರಿಂದ ಬೈಕ್ ಸವಾರ ರೋಹಿತ್ (21) ನನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು, ನವೆಂಬರ್​​ 8: ಚಲಿಸುತಿದ್ದ ಕಾರಿನ ಮಿರರ್​ಗೆ ಹೊಡೆದು ಬೈಕ್ ಸವಾರನೋರ್ವ (biker) ದುರ್ವತನೆ ತೋರಿರುವಂತಹ ಘಟನೆ ಕನಕಪುರ ಮುಖ್ಯರಸ್ತೆಯಲ್ಲಿ ನ. 5 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲೆ ಸಂಚಾರಿ ಪೊಲೀಸರಿಂದ ಬೈಕ್ ಸವಾರ  ರೋಹಿತ್ (21) ನನ್ನು ವಶಕ್ಕೆ ಪಡೆದಿದ್ದಾರೆ. ಒಟ್ಟು 19 ಸಾವಿರ ಮೌಲ್ಯದ 39 ಪ್ರಕರಣಗಳನ್ನು ಬೈಕ್ ಬಾಕಿ ಹೊಂದಿದೆ. ಕಾರ್ ಮಿರರ್ ಹೊಡೆದ ಕೃತ್ಯ ಸಂಬಂಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಎಫ್​​ಐಆರ್ ದಾಖಲಿಸಲಾಗಿದೆ. ತನ್ನ ಪಾಡಿಗೆ ತಾನು ಕಾರ್​ನಲ್ಲಿ ಚಾಲಕ ತೆರಳುತಿದ್ದ. ಈ ವೇಳೆ ಪಕ್ಕದಲ್ಲೇ ಬೈಕ್​ನಲ್ಲಿ ತ್ರಿಬಲ್ ರೇಡ್​ನಲ್ಲಿ ಬಂದ ಯುವಕರು ನೋಡ ನೋಡುತಿದ್ದಂತೆ ಕಾರ್​ನ ಸೈಡ್ ಮಿರರ್​ನ್ನು ಕೈನಿಂದ ಹೊಡೆದು ಚೂರು ಮಾಡಿ ಪರಾರಿ ಆಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Nov 08, 2023 09:43 PM