Video: ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ

Video: ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ

ನಯನಾ ರಾಜೀವ್
|

Updated on: Dec 13, 2024 | 10:48 AM

ಸಾಮಾನ್ಯವಾಗಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ಹೋದಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಅಲ್ಲಿರುವ ರಸ್ತೆಗಳಾಗಲೀ, ರೈಲು ಅಥವಾ ಇತರೆ ಸಾರಿಗೆಗಳ ಬಗ್ಗೆ ಹೆಚ್ಚಾದ ಮಾಹಿತಿ ಇರುವುದಿಲ್ಲ. ಹಾಗೆಯೇ ಚೀನಾ ಯುವತಿಯೊಬ್ಬಳು ಶ್ರೀಲಂಕಾದ ರೈಲಿನಲ್ಲಿ ಬಾಗಿಲ ಹೊರಗೆ ದೇಹ ಬಾಗಿಸಿ ರೀಲ್ಸ್​ ಮಾಡಲು ಹೋಗಿ ಜೀವಕ್ಕೇ ಕುತ್ತು ತಂದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಯುವತಿ ದೇಹವನ್ನು ಬಾಗಿಸಿ ರೀಲ್ಸ್​ ಮಾಡುತ್ತಿರುವಾಗ ಅಚಾನಕ್ಕಾಗಿ ಮರ ತಲೆಗೆ ಬಡಿದ ಪರಿಣಾಮ ಆಕೆ ಅಲ್ಲಿಯೇ ಬಿದ್ದಿದ್ದಾಳೆ. ಮುಂದಿನ ರೈಲು ನಿಲ್ದಾಣದಲ್ಲಿ ಇಳಿದು ಆಕೆಯನ್ನು ರಕ್ಷಿಸಲು ಜನರು ಓಡಿದ್ದಾರೆ. ಆಕೆ ಪೊದೆಯೊಳಗೆ ಬಿದ್ದ ಕಾರಣ ಬದುಕುಳಿದಿದ್ದಾಳೆ.

ಸಾಮಾನ್ಯವಾಗಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ಹೋದಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಅಲ್ಲಿರುವ ರಸ್ತೆಗಳಾಗಲೀ, ರೈಲು ಅಥವಾ ಇತರೆ ಸಾರಿಗೆಗಳ ಬಗ್ಗೆ ಹೆಚ್ಚಾದ ಮಾಹಿತಿ ಇರುವುದಿಲ್ಲ. ಹಾಗೆಯೇ ಚೀನಾ ಯುವತಿಯೊಬ್ಬಳು ಶ್ರೀಲಂಕಾದ ರೈಲಿನಲ್ಲಿ ಬಾಗಿಲ ಹೊರಗೆ ದೇಹ ಬಾಗಿಸಿ ರೀಲ್ಸ್​ ಮಾಡಲು ಹೋಗಿ ಜೀವಕ್ಕೇ ಕುತ್ತು ತಂದುಕೊಂಡಿರುವ ಘಟನೆಯ ವಿಡಿಯೋ ವೈರಲ್ ಆಗಿದೆ. ಯುವತಿ ದೇಹವನ್ನು ಹೊರಗಡೆ ಬಾಗಿಸಿ ರೀಲ್ಸ್​ ಮಾಡುತ್ತಿರುವಾಗ ಅಚಾನಕ್ಕಾಗಿ ಮರ ತಲೆಗೆ ಬಡಿದ ಪರಿಣಾಮ ಆಕೆ ಅಲ್ಲಿಯೇ ಬಿದ್ದಿದ್ದಾಳೆ. ಮುಂದಿನ ರೈಲು ನಿಲ್ದಾಣದಲ್ಲಿ ಇಳಿದು ಆಕೆಯನ್ನು ರಕ್ಷಿಸಲು ಜನರು ಓಡಿದ್ದಾರೆ. ಆಕೆ ಪೊದೆಯೊಳಗೆ ಬಿದ್ದ ಕಾರಣ ಅದೃಷ್ಟವಶಾತ್ ಬದುಕುಳಿದಿದ್ದಾಳೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ