AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪೊಲೀಸ್ ವಾಹನದ ಬಾನೆಟ್​ ಮೇಲೆ ಬರ್ತ್​ ಡೇ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ

Video: ಪೊಲೀಸ್ ವಾಹನದ ಬಾನೆಟ್​ ಮೇಲೆ ಬರ್ತ್​ ಡೇ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ

ನಯನಾ ರಾಜೀವ್
|

Updated on:Jun 20, 2025 | 9:14 AM

Share

ಪೊಲೀಸ್ ವಾಹನದ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿ ಪತ್ನಿಯೊಬ್ಬರು ಬರ್ತ್​ ಡೇ ಕೇಕ್ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಬಲರಾಂಪುರ-ರಾಮಾನುಜ್‌ಗಂಜ್‌ನ 12 ನೇ ಬೆಟಾಲಿಯನ್‌ನ ಡಿಎಸ್‌ಪಿ ತಸ್ಲೀಮ್ ಆರಿಫ್ ಅವರ ಪತ್ನಿ ಫರ್ಹೀನ್ ಖಾನ್ ಸ್ನೇಹಿತರೊಂದಿಗೆ ಪೊಲೀಸ್ ಜೀಪ್​​ನಲ್ಲಿ ಪ್ರಯಾಣಿಸಿದ್ದಷ್ಟೇ ಅಲ್ಲದೆ ಬಾನೆಟ್ ಮೇಲೆ ಕುಳಿತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.ಆಕೆ ಕೇಕ್ ಕತ್ತರಿಸುವಾಗ ಡ್ರೈವರ್ ಸೀಟ್​​ನಲ್ಲಿ ಓರ್ವ ಮಹಿಳೆ ಇದ್ದಾರೆ.

ಛತ್ತೀಸ್​ಗಢ, ಜೂನ್ 20: ಪೊಲೀಸ್ ವಾಹನದ ಬಾನೆಟ್ ಮೇಲೆ ಪೊಲೀಸ್ ಅಧಿಕಾರಿ ಪತ್ನಿಯೊಬ್ಬರು ಬರ್ತ್​ ಡೇ ಕೇಕ್ ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಬಲರಾಂಪುರ-ರಾಮಾನುಜ್‌ಗಂಜ್‌ನ 12 ನೇ ಬೆಟಾಲಿಯನ್‌ನ ಡಿಎಸ್‌ಪಿ ತಸ್ಲೀಮ್ ಆರಿಫ್ ಅವರ ಪತ್ನಿ ಫರ್ಹೀನ್ ಖಾನ್ ಸ್ನೇಹಿತರೊಂದಿಗೆ ಪೊಲೀಸ್ ಜೀಪ್​​ನಲ್ಲಿ ಪ್ರಯಾಣಿಸಿದ್ದಷ್ಟೇ ಅಲ್ಲದೆ ಬಾನೆಟ್ ಮೇಲೆ ಕುಳಿತು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆಕೆ ಕೇಕ್ ಕತ್ತರಿಸುವಾಗ ಡ್ರೈವರ್ ಸೀಟ್​​ನಲ್ಲಿ ಓರ್ವ ಮಹಿಳೆ ಇದ್ದಾರೆ.

ಸನ್​ರೂಫ್​, ಡಿಕ್ಕಿ ಸೇರಿ ಮೂರ್ನಾಲ್ಕುಮಹಿಳೆಯರು ಆ ವಾಹನದಲ್ಲಿರುವುದು ಕಾಣಬಹುದು. ಸರ್ಕಾರಿ ಆಸ್ತಿಯ ದುರುಪಯೋಗ ಮತ್ತು ಸಂಚಾರ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆ ಸ್ಪಷ್ಟವಾಗಿದ್ದರೂ, ಪೊಲೀಸರು ಡಿಎಸ್ಪಿ ಆರಿಫ್ ಅಥವಾ ಅವರ ಪತ್ನಿ ವಿರುದ್ಧ ಯಾವುದೇ ಎಫ್​ಐಆರ್ ದಾಖಲಾಗಿಲ್ಲ. ಬದಲಾಗಿ ವಾಹನದ ಚಾಲಕರ ವಿರುದ್ಧ ಎಫ್​ಐರ್ ದಾಖಲಿಸಲಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jun 20, 2025 09:12 AM