Video: ದಿನಸಿ ಅಂಗಡಿ ಬಾಗಿಲು ಮುರಿದು ಬಾಳೆಗೊನೆ ಕದ್ದು ತಿಂದ ಗಜರಾಜ!

Edited By:

Updated on: Aug 04, 2023 | 10:25 PM

Chamarajanagar News: ಕಾಡಾನೆ ಒಂದು ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ತಮಿಳುನಾಡಿನ ಅಸನೂರಲ್ಲಿ ನಡೆದಿದೆ. ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆ ಬಾಳೆಗೊನೆ ಎತ್ತಿಕೊಂಡು ತಿಂದಿದೆ.

ಚಾಮರಾಜನಗರ, ಆಗಸ್ಟ್​​ 04: ಪುಣಜನೂರು ಸಮೀಪದ ತಮಿಳುನಾಡಿನ ಅಸನೂರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿ ವಾಹನ ಅಡ್ಡಗಟ್ಟುತ್ತಿದ್ದ ಕಾಡಾನೆ (Elephant) ಇದೀಗ ದಿನಸಿ ಅಂಗಡಿಯ ಬಾಗಿಲು ಮುರಿದು ಬಾಳೆಗೊನೆ ಕದ್ದಿರುವ ಘಟನೆ ನಡೆದಿದೆ. ಅಸನೂರಿನ ವೆಂಕಟೇಶ್ ಎಂಬುವರ ದಿನಸಿ ಅಂಗಡಿಯ ಶಟರ್ ಮುರಿದ ಆನೆಯೊಂದು ಬಾಳೆಗೊನೆ ಎತ್ತಿಕೊಂಡು ತಿಂದಿದೆ. ಜೊತೆಗೆ, ಟೊಮೆಟೊ ತರಕಾರಿಯನ್ನು ತಿಂದಿದೆ. ಆನೆ ದಾಳಿಯಿಂದ ಎಚ್ವೆತ್ತ ಜನರು ಕಿರುಚಾಡಿ ಆನೆಯನ್ನು ಓಡಿಸಿದ್ದಾರೆ. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದು ಸಿಸಿಟಿವಿಯಲ್ಲೂ ಆನೆ ದಾಂಧಲೆ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್.ಎನ್

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More