Video: ನಾನಾ-ನೀನಾ,  ಬುಲ್ಡೋಜರ್​ ಜತೆ ಆನೆಯ ಕಾದಾಟ ನೋಡಿ

ನಯನಾ ರಾಜೀವ್
|

Updated on: Feb 04, 2025 | 8:16 AM

ಆಹಾರವನ್ನು ಅರಸಿ ಅಲೆಯುತ್ತಿದ್ದ ಆನೆಯನ್ನು ಬುಲ್ಡೋಜರ್ ಶಬ್ದ ಕೆಣಕಿತ್ತು, ಅದಕ್ಕೆ ಕೋಪಗೊಂಡ ಆನೆ ಬುಲ್ಡೋಜರ್​ ಮೇಲೆ ದಾಳಿ ಮುಂದಾಗಿರುವ ವಿಡಿಯೋವನ್ನು ನೀವು ಕಾಣಬಹುದು. ಈ ಘಟನೆ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯಲ್ಲಿ ನಡೆದಿದೆ. ಅಷ್ಟೇ ಅಲ್ಲದೆ ಹೊಲದಲ್ಲಿ ನಿರ್ಮಿಸಲಾಗಿದ್ದ, ವಾಚ್​ ಟವರ್ ಮೇಲೂ ಕೂಡ ಆನೆ ದಾಳಿ ನಡೆಸಿದೆ. ವಾಚ್ ಟವರ್ ಮೇಲೆ ಹಲವರಿದ್ದರು, ಆದರೆ ಆನೆಯ ದಾಳಿಯಿಂದಾಗಿ ಅವರೆಲ್ಲರೂ ಕೆಳಗೆ ಜಿಗಿದಿದ್ದಾರೆ. ಬಳಿಕ ಆನೆ ಬುಲ್ಡೋಜರ್​ ಅನ್ನು ಗುರಿಯಾಗಿಸಿಕೊಂಡು ಅದನ್ನು ಹಾನಿಗೊಳಿಸಲು ಪ್ರಯತ್ನಿಸಿತು. ಆನೆಗೂ ಕೂಡ ಗಾಯಗಳಾಗಿವೆ.

ಪ್ರಾಣಿಪ್ರಿಯ ಸಂಘಟನೆಯೊಂದು ಮಲ್ಬಜಾರ್ ಪೊಲೀಸ್​ ಠಾಣೆ ಹಾಗೂ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಬುಲ್ಡೋಜರ್ ಚಾಲಕನನ್ನು ಬಂಧಿಸಲಾಗಿದೆ. ಹಲವು ಸ್ಥಳೀಯರು ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಪ್ರಯತ್ನಿಸಿದ್ದರು. ಆನೆಗೆ ಆದ ಗಾಯದ ಬಗ್ಗೆ ಮಾಹಿತಿ ಪಡೆಯಲು ಅರಣ್ಯ ಅಧಿಕಾರಿಗಳನ್ನು ಕಾಡಿಗೆ ಕಳುಹಿಸಲಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ