ಮಾತ್ರೆ ಸೇವಿಸಿದ ಯುವಕ ಬದುಕಲಾರ ಅಂತ ಗೊತ್ತಿದ್ದರೂ ಪ್ರಕ್ರಿಯೆ ಆಸ್ಪತ್ರೆ ಅಡ್ಮಿಟ್ ಮಾಡಿಕೊಂಡಿದ್ದು ಯಾಕೆ?
ಮೃತನ ಕುಟುಂಬಸ್ಥರು ಕೇಳುವ ಕೆಲ ಪ್ರಶ್ನೆಗಳಿಗೆ ಅಸ್ಪತ್ರೆಯವರು ಉತ್ತರಿಸಬೇಕಿದೆ. ವಿಕ್ಟೋರಿಯ ಆಸ್ಪತ್ರೆ ಅಂತ ಹೇಳಿದ್ದರೂ ಅಂಬ್ಯುಲೆನ್ಸ್ ನವನು ಪ್ರಕ್ರಿಯೆ ಆಸ್ಪತ್ರೆಗೆ ರವಿಕಿರಣ್ನನ್ನು ಯಾಕೆ ತಂದ? ಪ್ರಕ್ರಿಯೆ ಆಸ್ಪತ್ರೆಯವರು ಯಾಕೆ ಯಾರನ್ನೂ ನೋಡಲು ಬಿಡಲಿಲ್ಲ ಮತ್ತು ನೀಡಿದ ಚಿಕಿತ್ಸೆ ಏನು? ದುಡ್ಡು ಪಾವತಿಸುವವರೆಗೆ ದೇಹವನ್ನು ಯಾಕೆ ತಮ್ಮಲ್ಲಿಟ್ಟುಕೊಂಡಿದ್ದರು. ಅವನು ಬದುಕಲಾರ ಅಂತ ಗೊತ್ತಿದ್ದರೆ ಅಡ್ಮಿಟ್ ಮಾಡಿಕೊಂಡಿದ್ಯಾಕೆ?
ನೆಲಮಂಗಲ: ಖಾಸಗಿ ಆಸ್ಪತ್ರೆಗಳು ರೋಗಿಗಳ ಅಮಾಯಕ ರೋಗಿಗಳ ಕುಟುಂಬಸ್ಥರಿಂದ ಹಣ ಸುಲಿಗೆ ಮಾಡುವ ಮತ್ತೊಂದು ಪ್ರಕರಣ ಬಯಲಾಗಿದೆ. ನಗರದ 8ನೇ ಮೈಲಿಯಲ್ಲಿರುವ ಪ್ರಕ್ರಿಯೆ ಹೆಸರಿನ ಆಸ್ಪತ್ರೆಗೆ ಹಾಸನ ಜಿಲ್ಲೆಯ ಬ್ಯಾಡರಹಳ್ಳಿಯ ರವಿಕಿರಣ್ ಹೆಸರಿನ ಸುಮಾರು 22 ವರ್ಷದ ಯುವಕನನ್ನು ದಾಖಲಿಸಲಾಗಿತ್ತು. ಅವನು ಮಾತ್ರೆ ಸೇವಿಸಿ ಸಾವಿಗೆ ಶರಣಾಗಬಯಸಿದ್ದನಂತೆ. ದುಡ್ಡಿನಾಸೆಗಾಗಿ ಅಂಬ್ಯುಲೆನ್ಸ್ ನವನು ರವಿಕಿರಣ್ನನ್ನು ವಿಕ್ಟೋರಿಯ ಆಸ್ಪತ್ರೆಗೆ ಒಯ್ಯದೆ ಪ್ರಕ್ರಿಯೆ ಆಸ್ಪತ್ರೆಗೆ ಒಯ್ದಿದ್ದಾನೆ ಎಂದು ಸಂಬಂಧಿಕರು ಹೇಳುತ್ತಾರೆ. ರವಿಕಿರಣ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಅದರೆ, ಚಿಕಿತ್ಸೆ ಫಲಿಸದೆ ಅವನು ಸಾವನ್ನಪ್ಪಿದ್ದಾನೆ. ಆದರೆ, ಆಸ್ಪತ್ರೆಯವರು ಎರಡು ಲಕ್ಷ ಆಸ್ಪತ್ರೆ ಬಿಲ್ ಕಟ್ಟಿದ ಬಳಿಕವೇ ಅವನನ್ನು ನೋಡಲು ಬಿಟ್ಟಿದ್ದಾರೆ ಎಂದು ಮೃತನ ಸಂಬಂಧಿಕ ನಾಗೇಶ್ ಅರೋಪಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಣಂತಿ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪ: ಅವಳಿ ಮಕ್ಕಳ ತಾಯಿ ಸಾವಿಗೆ ಕಾರಣವಾಯ್ತಾ ಖಾಸಗಿ ಆಸ್ಪತ್ರೆ