Video: ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಅಸ್ಸಾಂನ ಮಾಜಿ ಸಿಎಂ ಮಗಳು
ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಮಹಾಂತ ಅವರ ಪುತ್ರಿ ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮದ್ಯದ ಅಮಲಿನಲ್ಲಿ ಚಾಲಕ ತನ್ನನ್ನು ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಡ್ರೈವರ್ ಆಕೆಯ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು.
ಅಸ್ಸಾಂ, ಮಾರ್ಚ್ 04: ಅಸ್ಸಾಂನ ಮಾಜಿ ಮುಖ್ಯಮಂತ್ರಿ ಪ್ರಫುಲ್ಲ ಮಹಾಂತ ಅವರ ಪುತ್ರಿ ಕಾರು ಚಾಲಕನಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮದ್ಯದ ಅಮಲಿನಲ್ಲಿ ಚಾಲಕ ತನ್ನನ್ನು ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಡ್ರೈವರ್ ಆಕೆಯ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯಾಚಿಸುತ್ತಿರುವುದನ್ನು ಕಾಣಬಹುದು. ಆಕೆ ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾಳೆ. 1985 ರಿಂದ 1990 ರವರೆಗೆ ಮತ್ತು ಮತ್ತೆ 1996 ಮತ್ತು 2001 ರ ನಡುವೆ ಪ್ರಫುಲ್ಲ ಅವರು ಎರಡು ಬಾರಿ ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ