ಕರಿ ಹರಿಯುವ ವೇಳೆ ಅವಘಡ: ಹಲವರಿಗೆ ಕೊಂಬಿನಿಂದ ತಿವಿದ ಹೋರಿ, ವಿಡಿಯೋ ವೈರಲ್
ಕರಿ ಹರಿಯುವ ವೇಳೆ ಹಲವರಿಗೆ ಕೊಂಬಿನಿಂದ ಹೋರಿ ತಿವಿದು ಗಾಯಗೊಳಿಸಿದೆ. ಸ್ಥಳೀಯರು ಹೋರಿ ತಿವಿಯುವ ವಿಡಿಯೋ ಮಾಡಿದ್ದು, ವೈರಲ್ ಆಗಿದೆ.
ವಿಜಯಪುರ: ಕಾರಹುಣ್ಣಿಮೆ ರೈತರ ಪಾಲಿನ ಸಂಭ್ರಮದ ಹಬ್ಬಗಳಲ್ಲೊಂದು. ಪ್ರತಿ ವರ್ಷ ಉತ್ತರ ಕರ್ನಾಟಕ ಭಾಗದ ರೈತರು ಕಾರ ಹುಣ್ಣಿಮೆ (Kara Hunnime) ಯನ್ನು ಅತ್ಯಂತ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದಂದು ಕರಿ ಹರಿಯುವ ಸ್ಪರ್ಧೆಯನ್ನು ಸಹ ಆಯೋಜನೆ ಮಾಡಲಾಗುತ್ತದೆ. ಈ ವೇಳೆ ಆಕಸ್ಮಿಕ ಅವಘಡಗಳು ಸಂಭವಿಸುತ್ತವೆ. ಸದ್ಯ ಅಂತಹದ್ದೇ ಒಂದು ಅವಘಡ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ನಡೆದಿದೆ. ಕರಿ ಹರಿಯುವ ವೇಳೆ ಹಲವರಿಗೆ ಕೊಂಬಿನಿಂದ ಹೋರಿ ತಿವಿದು ಗಾಯಗೊಳಿಸಿದೆ. ಸ್ಥಳೀಯರು ಹೋರಿ ತಿವಿಯುವ ವಿಡಿಯೋ ಮಾಡಿದ್ದು, ವೈರಲ್ ಆಗಿದೆ. ಸದ್ಯ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.