Loading video

Video: ನವ ವಧುವಿನ ಜತೆ ಮಾವನ ಮನೆಗೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದ ಅಳಿಯ, ಅದ್ದೂರಿ ಸ್ವಾಗತ

|

Updated on: Feb 18, 2025 | 12:36 PM

ಮದುವೆ ಮನೆಗೆ ಕುದುರೆ ಏರಿ ವರ ಬರುವುದು ಉತ್ತರ ಭಾರತದಲ್ಲಿ ಸಾಮಾನ್ಯ, ಇನ್ನೂ ಕೆಲವರು ದೊಡ್ಡ ದೊಡ್ಡ ಕಾರಿನಲ್ಲಿ ಬರುತ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಕರೆದುಕೊಂಡು ಮಾವನ ಮನೆಗೆ ಹೆಲಿಕಾಪ್ಟರ್​ನಲ್ಲಿ ಬಂದಿಳಿದಿದ್ದು, ಎಲ್ಲರಿಗೂ ಅಚ್ಚರಿ ತಂದಿತ್ತು. ನವಜೋಡಿಯನ್ನು ವಿಶೇಷವಾಗಿ ಬರಮಾಡಿಕೊಂಡರು. ಈ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

ಊರಿನ ಮಗಳು ಹೆಲಿಕಾಒ್ಟರ್​ನಲ್ಲಿ ಬಂದಿಳಿಯುವುದನ್ನು ನೋಡಲು ಇಡೀ ಊರಿಗೆ ಊರೇ ನೆರೆದಿತ್ತು.
ಸರಸಾಯಿ ಗ್ರಾಮದ ನಿವಾಸಿ ಅಭಯ್ ಶರ್ಮಾ ಅವರ ಪುತ್ರ ಕೃಷ್ಣ ಶರ್ಮಾ, ತನ್ನ ಸಹೋದರಿ ಸುಪ್ರಿಯಾ ರಾಣಿ ಮತ್ತು ಬಾವ ಧೀರಜ್ ರೈ ಅವರನ್ನು ಹೆಲಿಕಾಪ್ಟರ್ ಮೂಲಕ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು, ಅಗ್ನಿಶಾಮಕ ವಾಹನಗಳು ಸಹ ಸ್ಥಳದಲ್ಲಿದ್ದವು.

ಹೆಲಿಕಾಪ್ಟರ್ ಇಳಿದ ತಕ್ಷಣ ಜನರು ಸುಪ್ರಿಯಾ ರಾಣಿ ಮತ್ತು ಧೀರಜ್ ರಾಯ್ ಅವರನ್ನು ಹೂಮಾಲೆಗಳೊಂದಿಗೆ ಸ್ವಾಗತಿಸಿದರು. ಇದಾದ ನಂತರ, ನವವಿವಾಹಿತ ದಂಪತಿಗಳನ್ನು ಕಾರಿನಲ್ಲಿ ಮನೆಗೆ ಕರೆದೊಯ್ಯಲಾಯಿತು. ಧೀರಜ್ ರೈ ಮಧ್ಯಪ್ರದೇಶದಲ್ಲಿ ತಹಶೀಲ್ದಾರ್ ಆಗಿ ನೇಮಕಗೊಂಡಿದ್ದಾರೆ ಮತ್ತು ಉತ್ತರ ಪ್ರದೇಶದ ಬಲ್ಲಿಯಾ ನಿವಾಸಿಯಾಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ