ತಮ್ಮ ಅಧೀನದಲ್ಲಿರುವ ರಾಜಣ್ಣರನ್ನೇ ಕೆಪಿಸಿಸಿ ಕಾರ್ಯಾಧ್ಯಕ್ಷ ಕರೆಸಿ ಮಾತಾಡಬಹುದಿತ್ತು: ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಪೂರ್ಣಾವಧಿಗೆ ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಅಂತ ಡಿಕೆ ಶಿವಕುಮಾರ್ ಹೇಳಿರುವುದನ್ನು ಜಾರಕಿಹೊಳಿಗೆ ತಿಳಿಸಿದಾಗ, ಅಷ್ಟಾದರೆ ಸಿಎಂ ಕುರ್ಚಿಗೆ ಸಂಬಂಧಿಸಿದ ವಿವಾದವೇ ಕೊನೆಗೊಂಡಂತಾಯಿತಲ್ಲ, ಅದರ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನ ಎಂದು ಸಚಿವ ಹೇಳಿದರು.
ಮಂಗಳೂರು: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಪಕ್ಷದಲ್ಲಿ ನಾಯಕರು ಅಭಿಪ್ರಾಯಗಳನ್ನು ತಿಳಿಸಲು ಸ್ವತಂತ್ರರು, ಆದರೆ ಅಂತಿಮ ನಿರ್ಣಯಗಳನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಕೆಎನ್ ರಾಜಣ್ಣ ಅವರಾಡುವ ಮಾತುಗಳಿಂದ ಪಕ್ಷಕ್ಕೆ ಮುಜುಗುರವಾಗುತ್ತಿದೆ, ಬಾಯಿಗೆ ಬಂದಿದ್ದನ್ನೆಲ್ಲ ಮಾತಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಎಐಸಿಸಿಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಚಂದ್ರಶೇಖರ್ ಪಕ್ಷದ ಕಾರ್ಯಾಧ್ಯಕ್ಷರು, ರಾಜಣ್ಣ ಅವರಿಗೆ ಅಧೀನರಾಗಿರುವುದರಿಂದ ಸಚಿವನನ್ನು ಕರೆಸಿಕೊಂಡು ಮಾತಾಡಿದ್ದರು ಸಚಿವ ದೆಹಲಿಗೆ ಹೋಗುವ ಪ್ರಮೇಯ ಉದ್ಭವಿಸುತ್ತಿರಲಿಲ್ಲ ಎಂದು ಸತೀಶ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ದುಬೈ ಪ್ರವಾಸಕ್ಕೆ ಮರುಜೀವ: ಸತೀಶ್ ಜಾರಕಿಹೊಳಿ ಬೆಂಬಲಿಗರ ತಂಡದಿಂದ ಸಿದ್ಧತೆ