ಬಾಗಪ್ಪ ಹರಿಜನ್ ಹತ್ಯೆ ಆರೋಪಿಗಳನ್ನು 14-ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ವಿಜಯಪುರದ ನ್ಯಾಯಾಲಯ
ಬಾಗಪ್ಪ ಹರಿಜನ್ ಮೇಲೆ 2018ರಲ್ಲೇ ಮಾರಣಾಂತಿಕ ಹಲ್ಲೆ ನಡೆದಿತ್ತು ಅದರೆ, ಸಾಕಷ್ಟು ದುಡ್ಡು ಹೊಂದಿದ್ದ ಅವನು ಹೈದರಾಬಾದ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆಗ ಕಲಬುರಗಿ ಮತ್ತು ವಿಜಯಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಬಾಗಪ್ಪ ತನ್ನ ಚಿಕಿತ್ಸೆಗಾಗಿ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಹಣ ಖರ್ಚು ಮಾಡಿದ್ದ.
ವಿಜಯಪುರ: ಬಾಗಪ್ಪ ಹರಿಜನ ಭೀಕರ ಹತ್ಯೆ ನಡೆದು ಒಂದು ವಾರ ಕಳೆದಿದೆ. ವಿಜಯಪುರದ ಪೊಲೀಸರು ಅರೋಪಿಗಳನ್ನು ಕೇವಲ 3 ದಿನಗಳಲ್ಲಿ ಬಂಧಿಸಿದ್ದರು. ಅರೋಪಿಗಳಾದ ಪ್ರಕಾಶ್ ಅಲಿಯಾಸ್ ಪಿಂಟ್ಯಾ, ರಾಹುಲ್ ತಳಕೇರಿ, ಮಣಿಕಂಠ ಬೆನಕೊಪ್ಪ ಮತ್ತು ಸುದೀಪ್ ಕಾಂಬಳೆಯನ್ನು ಪೊಲೀಸರು ಇವತ್ತು ನಗರದ ಎರೆಡನೇ ಹೆಚ್ಚುವರಿ ಮತ್ತು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಮ್ಮ ವಿಜಯಪುರ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ನ್ಯಾಯಾಲಯವು ಆರೋಪಿಗಳನ್ನು 14-ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಭೀಮಾ ತೀರದ ಹಂತಕರಲ್ಲಿ ಒಬ್ಬನೆಂಬ ಕುಖ್ಯಾತಿಯ ಚಂದಪ್ಪ ಹರಿಜನ್ ಫೆಬ್ರುವರಿ 11 ರಂದು ವಿಜಯಪುರದ ಮದೀನಾ ನಗರದಲ್ಲಿ ಹತ್ಯೆಗೀಡಾಗಿದ್ದ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಗಪ್ಪ ಹರಿಜನ ಕೊಲೆ ರಹಸ್ಯ ಬಯಲು: ಹತ್ಯೆಯಾದ ವಕೀಲ ರವಿಯ ಪತ್ನಿ, ಆಸ್ತಿ ಮೇಲೆ ಕಣ್ಣಾಕಿದ್ದ ನಟೋರಿಯಸ್ ರೌಡಿ

ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್ ಯತ್ನಾಳ್

Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್ಪ್ರೆಸ್ ರೈಲು

IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ

ಹೋಟೆಲ್ನ ಕೊನೆಯ ಮಹಡಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಲಗಿದ್ದ ಜೋಡಿ
