ಸಂಸದನಾದ ಮೇಲೆ 71 ಎಕರೆ ಹಾಗಿರಲಿ 71 ಇಂಚು ಜಮೀನು ಕೂಡ ಖರೀದಿಸಿಲ್ಲ: ಡಾ ಸಿನ್ ಮಂಜುನಾಥ್
ಒಂದೆರಡು ಟಿವಿ ಮಾಧ್ಯಮಗಳಲ್ಲಿ ತಾನು ಜಮೀನು ಖರೀದಿಸಿರುವ ಬಗ್ಗೆ ವರದಿಗಳು ಬಿತ್ತರಗೊಳ್ಳುತ್ತಿವೆ ಎಂದು ಡಾ ಮಂಜುನಾಥ್ ಹೇಳಿದರು. ಅಸಲಿಗೆ ಸಾಮಾಜಿಕ ಕಾರ್ಯಕರ್ತ ಎಸ್ ಆರ್ ಹಿರೇಮಠ ಕೆಲ ದಿನಗಳ ಹಿಂದೆ ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಡದಿ ಹೋಬಳಿಯ ಕೇತಗಾನಗಹಳ್ಳಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ, ಅವರ ಚಿಕ್ಕಮ್ಮ ಮತ್ತು ಡಾ ಮಂಜುನಾಥ್ ಹಾಗೂ ಇನ್ನಿತರರು 71 ಎಕರೆ ಗೋಮಾಳ ಜಮೀನನ್ನು ಕಬಳಿಸಿರುವರೆಂದು ಆರೋಪಿಸಿದ್ದರು.
ರಾಮನಗರ: ಜಿಲ್ಲೆಯ ಕೇತಗಾನಹಳ್ಳಿಯಲ್ಲಿ ತಾವು ಸಂಸದರಾದ ಮೇಲೆ 71 ಎಕರೆ ಜಮೀನು ಖರೀದಿಸಿರುವ ಅರೋಪಗಳಿಗೆ ಇಂದು ರಾಮನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ ಬಿಜೆಪಿ ಸಂಸದ ಡಾ ಸಿಎನ್ ಮಂಜುನಾಥ್ ಅವರು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಅಫಿಡವಿಟ್ ಅನ್ನು ಸಲ್ಲಿಸಿದ್ದೇನೆ, ಎಂಪಿಯಾದ ಮೇಲೆ 71 ಎಕರೆ ಜಮೀನು ಖರೀದಿಸುವ ಮಾತು ಹಾಗಿರಲಿ, 71 ಇಂಚು ಜಮೀನನ್ನೂ ಖರೀದಿಸಿಲ್ಲ ಎಂದು ಹೇಳಿದರು. 1996 ರಲ್ಲ ತನ್ನ ತಂದೆಯವರು ಕೇತಗಾನಹಳ್ಳಿಯಲ್ಲಿ ಮೂರೂವರೆ ಎಕರೆ ಜಮೀನು ಖರೀದಿಸಿದ್ದರು, ಅವರು ವಿಧವಶರಾದ ಬಳಿಕ ಅ ಜಮೀನು ತನಗೆ ಬಂದಿದೆ ಎಂದು ಡಾ ಮಂಜುನಾಥ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕುಮಾರಸ್ವಾಮಿ ಮತ್ತು ಡಾ ಸಿಎನ್ ಮಂಜುನಾಥ್ ವಿರುದ್ಧ ಗೋಮಾಳ ಕಬಳಿಕೆ ಆರೋಪ ಮಾಡಿದ ಎಸ್ ಆರ್ ಹಿರೇಮಠ