ಬಡವರಿಗೆ ತೊಂದರೆಯಾಗದಂತೆ ಪ್ರಾಮಾಣಿಕವಾಗಿ ಇ ಖಾತಾಗಳನ್ನು ಮಾಡಿಕೊಡಲು ಅಧಿಕಾರಿಗಳಿಗೆ ಪ್ರದೀಪ್ ಈಶ್ವರ್ ಸೂಚನೆ
ಇ ಖಾತಾ ಅಭಿಯಾನವನ್ನು 90 ದಿನಗಳಲ್ಲಿ ಮುಗಿಸಬೇಕೆಂದು ಮುಖ್ಯಮಂತ್ರಿಯವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಮತ್ತು ಯಾವ ಕಾರಣಕ್ಕೂ ಅವಧಿಯನ್ನು ವಿಸ್ತರಿಸುವುದಿಲ್ಲ ಎಂದು ಹೇಳಿದ್ದಾರೆ, ಕೆಲಸವನ್ನು ಜಾಗ್ರತೆಯಿಂದ ಮತ್ತು ಅಷ್ಟೇ ವೇಗವಾಗಿ ಮಾಡಬೇಕಿದೆ, ಯಾವ ಕಾರಣಕ್ಕೂ ಉದಾಸೀನ ಮಾಡೋದು ಬೇಡ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಚಿಕ್ಕಬಳ್ಳಾಪುರ: ನಗರದ ಜಿಲ್ಲಾ ಪಂಚಾಯತ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಇ ಖಾತಾ ಅಭಿಯಾನವನ್ನು ಕಟ್ಟುನಿಟ್ಟಾಗಿ, ಪ್ರಾಮಾಣಿಕತೆಯಿಂದ ಮತ್ತು ಬಡವರಿಗೆ ತೊಂದರೆಯಾಗದಂತೆ ನಡೆಸಲು ಸೂಚನೆ ನೀಡಿದರು. ನಗರದಲ್ಲಿ ಸುಮಾರು 14,000ಇ ಖಾತಾಗಳನ್ನು ಮಾಡಬೇಕಿದೆ, ಇಲ್ಲಿರುವವರೆಲ್ಲ ಸರ್ಕಾರಿ ನೌಕರರು ಮತ್ತು ನಿಯಮಿತವಾಗಿ ಸರ್ಕಾರದಿಂದ ಸಂಬಳ ಪಡೆಯುತ್ತಿರುವವರು, ಹಾಗಾಗಿ ಯಾವುದೇ ದಲ್ಲಾಳಿಗಳ ಮಧ್ಯಪ್ರವೇಕ್ಕೆ ಅವಕಾಶ ನೀಡದೆ, ಹೆಚ್ಚುವರಿ ಹಣಕ್ಕೆ ಅಸೆಪಡದೆ ಬಡವರ ಖಾತೆಗಳನ್ನು ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ