ಹುಬ್ಬಳ್ಳಿ: 50 ವರ್ಷದ ವಿವಾಹಿತ ಪುರುಷನೊಂದಿಗೆ ನಾಪತ್ತೆಯಾಗಿದ್ದ 18ರ ಯುವತಿ ಕಹಾನಿಯಲ್ಲಿ ಟ್ವಿಸ್ಟ್ನೊಂದಿಗೆ ವಾಪಸ್ಸಾಗಿದ್ದಾಳೆ!
ಯುವತಿ ಹೇಳೋದೇ ನಿಜವಾದರೆ ಪ್ರಕಾಶ್ ಒಬ್ಬ ಮನೋರೋಗಿ ಇರಬಹುದೆಂಬ ಸಂಶಯ ಹುಟ್ಟುತ್ತದೆ. ವಯಸ್ಸಿನಲ್ಲಿ ತನಗಿಂತ ಬಹಳ ಚಿಕ್ಕವರನ್ನು ಅವನು ಟಾರ್ಗೆಟ್ ಮಾಡಿದ್ದಾನೆ. ತನ್ನನಲ್ಲದೆ ಬೇರೆ ಯುವತಿಯರ ಬಾಳಲ್ಲೂ ಅವನು ಚಕ್ಕಂದವಾಡಿದ್ದಾನೆ ಎಂದು ಯುವತಿ ಹೇಳುತ್ತಾಳೆ. ಆಕೆಯ ಪಾಲಕರು ಪ್ರಕಾಶ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಈ ಪ್ರಕರಣವನ್ನು ಹುಬ್ಬಳ್ಳಿ ಪೊಲೀಸರು ಹೇಗೆ ನಿಭಾಯಿಸುತ್ತಾರೋ ಕಾದು ನೋಡಬೇಕು.
ಹುಬ್ಬಳ್ಳಿ: ಹದಿನೆಂಟು ವರ್ಷದ ಹುಬ್ಬಳ್ಳಿ ಹುಡುಗಿ ಮತ್ತು 50-ವರ್ಷ ವಯಸ್ಸಿನ ಪ್ರಕಾಶ್ ಗೋಪಿಯ ಲವ್ ಸ್ಟೋರಿಯನ್ನು ನಾವು ವರದಿ ಮಾಡಿದ್ದೇವೆ. ಮಗಳ ಭವಿಷ್ಯ ದೃಷ್ಟಿಯಿಂದ ಮತ್ತು ಪ್ರಕಾಶ್ನಿಂದ ಬಚಾವ್ ಮಾಡಲು ಯುವತಿಯ ಪಾಲಕರು ಆಕೆಯನ್ನು ಕೊಲ್ಹಾಪುರದಲ್ಲಿಟ್ಟು ಓದಿಸುತ್ತಿದ್ದರು. ಈಗ ಈ ಪ್ರೇಮ್ ಕಹಾನಿಗೆ ಒಂದು ವಿಚಿತ್ರ ತಿರುವು ಸಿಕ್ಕಿದೆ. ಕೊಲ್ಹಾಪುರದಿಂದ ನಾಪತ್ತೆಯಾಗಿದ್ದ ಯುವತಿ ಕೆಲದಿನಗಳ ಬಳಿಕ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾಳೆ. ಆಕೆ ಹೇಳುವ ಪ್ರಕಾರ ಪ್ರಕಾಶ್ ಹೋಟೆಲೊಂದಕ್ಕೆ ಆಕೆಯನ್ನು ಕರೆಸಿ, ತಂಪು ಪಾನೀಯದಲ್ಲಿ ಏನೋ ಬೆರೆಸಿ ಪ್ರಜ್ಞೆ ತಪ್ಪುವಂತೆ ಮಾಡಿ ಎಲ್ಲಿಗೋ ಕರೆದೊಯ್ದು ಮದುವೆಯಾಗಿದ್ದಾನೆ. ಮದುವೆಯಾದ ಫೋಟೋ ಇಲ್ಲಿ ನೋಡಬಹುದು. ಬಸ್ಸಿನಲ್ಲಿ ಕರೆದೊಯ್ದ ಅಂತ ಯುವತಿ ಒಮ್ಮೆ ಹೇಳುತ್ತಾಳೆ, ಅಮೇಲೆ ಯಾವ ವಾಹನ ಗೊತ್ತಿಲ್ಲ ಅನ್ನುತ್ತಾಳೆ. ತಾನು ಹೇಳಿದಂತೆ ಕೇಳದಿದ್ದರೆ ಯುವತಿಯ ತಂದೆತಾಯಿಯನ್ನು ಕೊಂದು ಹಾಕುವ ಬೆದರಿಕೆಯನ್ನು ಅವನು ಒಡ್ಡಿದ್ದನಂತೆ. ಯುವತಿ ಹೇಳುವ ವಿಷಯಗಳ ಡಾಟ್ ಗಳನ್ನು ಕನೆಕ್ಟ್ ಮಾಡಿ ಸ್ಪಷ್ಟ ಚಿತ್ರಣವನ್ನು ಕಂಡುಕೊಳ್ಳುವುದು ಕಷ್ಟವಾಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 50 ವರ್ಷದ ಅಂಕಲ್ನ ಮದ್ವೆಯಾದ 18 ವರ್ಷದ ಯುವತಿ: ಹುಬ್ಬಳ್ಳಿಯಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ