11 ವರ್ಷ ಒಟ್ಟಾಗಿ ಕಳೆದ ನಯನತಾರಾ-ವಿಘ್ನೇಶ್ಗೆ ವಿವಾಹ ವಾರ್ಷಿಕೋತ್ಸವ
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಒಟ್ಟಾಗಿ ಸಮಯ ಕಳೆಯುತ್ತಿದ್ದಾರೆ. ಇವರು ಮದುವೆ ಆಗಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ. ಈಗ ಈ ದಂಪತಿಗೆ ವಿವಾಹ ವಾರ್ಷಿಕೋತ್ಸವ. ಇದಕ್ಕೆ ಸಂಬಂಧಿಸಿದಂತೆ ಒಂದು ಸುಂದರ ವಿಡಿಯೋನ ಹಂಚಿಕೊಂಡಿದ್ದಾರೆ ವಿಘ್ನೇಶ್. ಆ ಸಂದರ್ಭದ ವಿಡಿಯೋ ಇಲ್ಲಿ ಇದೆ.
ನಟಿ ನಯನಾತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ದಾಂಪತ್ಯಕ್ಕೆ ಮೂರು ವರ್ಷ. ಇದಕ್ಕೆ ವಿಘ್ನೇಶ್ ಅವರು ಪತ್ನಿಗೆ ಶುಭಕೋರಿದ್ದಾರೆ. ಈ ವೇಳೆ ತಮ್ಮಿಬ್ಬರ ಪ್ರೀತಿಗೆ 11 ವರ್ಷಗಳು ಕಳೆದಿವೆ ಎಂಬುದನ್ನು ಅವರು ಹೇಳಿದ್ದಾರೆ. ‘ನಾನುಮ್ ರೌಡಿ ದಾನ್’ ಸಿನಿಮಾದಲ್ಲಿ ನಯನತಾರಾ ನಟಿಸಿದರು. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಇತ್ತು. ಈ ಸಿನಿಮಾ ರಿಲೀಸ್ ಆಗಿದ್ದು 2015ರಲ್ಲಿ. ಆದರೆ, ಚಿತ್ರ ಸೆಟ್ಟೇರಿದ್ದು 2014ರಲ್ಲಿ. ಈ ವೇಳೆ ಸೆಟ್ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು. ಹೀಗಾಗಿ ಇವರ ಪಯಣಕ್ಕೆ 11 ವರ್ಷ ತುಂಬಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು

