AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಯನಾತಾರಾ ಹಾಗೂ ವಿಘ್ನೇಶ್ ಪೈಕಿ ಶ್ರೀಮಂತ ಯಾರು? ಇಲ್ಲಿದೆ ವಿವರ  

ವಿಘ್ನೇಶ್ ಹಾಗೂ ನಯನಾತಾರಾ ಅವರ ಒಟ್ಟೂ ಆಸ್ತಿ 215 ಕೋಟಿ ರೂಪಾಯಿ. ನಯನತಾರಾ ಅವರ ಆಸ್ತಿ 165 ಕೋಟಿ ರೂಪಾಯಿ ಆದರೆ, ವಿಘ್ನೇಶ್ ಶಿವನ್ ಆಸ್ತಿ 50 ಕೋಟಿ ರೂಪಾಯಿ. ವಿಘ್ನೇಶ್​ಗಿಂತ ನಯನತಾರಾ ಹೆಚ್ಚು ಶ್ರೀಮಂತರು. ಪತಿಗಿಂತ ನಯನತಾರಾಗೆ ಹೆಚ್ಚು ಜನಪ್ರಿಯತೆ ಇದೆ.

ನಯನಾತಾರಾ ಹಾಗೂ ವಿಘ್ನೇಶ್ ಪೈಕಿ ಶ್ರೀಮಂತ ಯಾರು? ಇಲ್ಲಿದೆ ವಿವರ  
ನಯನಾತಾರಾ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Nov 18, 2024 | 8:18 AM

Share

ನಟಿ ನಯನತಾರಾಗೆ ಇಂದು (ನವೆಂಬರ್ 18) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ವಿಶ್​ಗಳು ಬರುತ್ತಿವೆ. ಇತ್ತೀಚೆಗೆ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಧನುಷ್ ಹಾಡನ್ನು ಬಳಕೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಅವರು ನಯನಾತಾರಾಗೆ ನೋಟಿಸ್ ಕಳುಹಿಸಿದ್ದಾರೆ. ಈ ಬಗ್ಗೆ ಅವರು ಓಪನ್ ಲೆಟರ್ ಬರೆದಿದ್ದಾರೆ. ಸದ್ಯ ವಿಘ್ನೇಶ್ ಶಿವನ್ ಜೊತೆ ಮದುವೆ ಆಗಿ ನಯನತಾರಾ ಹಾಯಾಗಿದ್ದಾರೆ. ಹಾಗಾದರೆ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಆ ಬಗ್ಗೆ ಇಲ್ಲಿದೆ ವಿವರ.

ವಿಘ್ನೇಶ್ ಹಾಗೂ ನಯನಾತಾರಾ ಅವರ ಒಟ್ಟೂ ಆಸ್ತಿ 215 ಕೋಟಿ ರೂಪಾಯಿ. ನಯನತಾರಾ ಅವರ ಆಸ್ತಿ 165 ಕೋಟಿ ರೂಪಾಯಿ ಆದರೆ, ವಿಘ್ನೇಶ್ ಶಿವನ್ ಆಸ್ತಿ 50 ಕೋಟಿ ರೂಪಾಯಿ. ವಿಘ್ನೇಶ್​ಗಿಂತ ನಯನತಾರಾ ಹೆಚ್ಚು ಶ್ರೀಮಂತರು. ಪತಿಗಿಂತ ನಯನತಾರಾಗೆ ಹೆಚ್ಚು ಜನಪ್ರಿಯತೆ ಇದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.

ನಯನತಾರಾ ಅವರು ದಕ್ಷಿಣ ಭಾರತದ ಖ್ಯಾತ ನಟಿ. ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ‘ಜವಾನ್’ ಸಿನಿಮಾದಲ್ಲಿ ಶಾರುಖ್ ಜೊತೆ ನಟಿಸಿ ಅವರು ಖ್ಯಾತಿ ಪಡೆದರು. ಅವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಬ್ರ್ಯಾಂಡ್ ಪ್ರಚಾರಕ್ಕೆ 5 ಕೋಟಿ ರೂಪಾಯಿ ಪಡೆಯುತ್ತಾರೆ. ನಯನತಾರಾ ಹಲವು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಇದರ ಬೆಲೆ 100 ಕೋಟಿ ರೂಪಾಯಿ ದಾಟಿದೆ. ಅವರು ಹೈದರಾಬಾದ್​ನಲ್ಲೂ ಮನೆ ಹೊಂದಿದ್ದು, 15 ಕೋಟಿ ರೂಪಾಯಿ ಇದರ ಬೆಲೆ ಎನ್ನಲಾಗಿದೆ. ಅವರು ಚೆನ್ನೈನಲ್ಲಿ 4 ಬಿಎಚ್​ಕೆ ಮನೆ ಹೊಂದಿದ್ದಾರೆ. ಕೇರಳದಲ್ಲೂ ಅವರಿಗೆ ಮನೆ ಇದೆ. ಅವರು ಖಾಸಗಿ ಜೆಟ್ ಖರೀದಿ ಮಾಡಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ಪ್ರಭುದೇವ ಮದುವೆ ಆಗಲು ನಯನತಾರಾ ಹೊರಟಾಗ; ಕೋರ್ಟ್ ಮೆಟ್ಟಿಲೇರಿತ್ತು ಪ್ರಕರಣ

ವಿಘ್ನೇಶ್ ಶಿವನ್ ಅವರು ಗೀತ ಸಾಹಿತಿ ಕೂಡ ಹೌದು. ಪ್ರತಿ ಹಾಡಿಗೆ ಅವರು 1ರಿಂದ 3 ಲಕ್ಷ ರೂಪಾಯಿ ಪಡೆಯುತ್ತಾರೆ. ಅವರು ಸಿನಿಮಾ ನಿರ್ದೇಶನಕ್ಕೆ ಕೋಟಿ ಪಡೆಯುತ್ತಾರೆ. ಅವರು ತಮ್ಮದೇ ಮನೆ ಹೊಂದಿದ್ದಾರೆ. ವಿಘ್ನೇಶ್ ಶಿವನ್ ಅವರು ನಿರ್ದೇಶಕರಾಗಿ ಗುರುತಿಸಿಕೊಂಡರೆ, ನಯನಾತಾರಾ ನಟಿ ಆಗಿ ಜನಪ್ರಿಯತೆ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
ಮಳೆ ಕಾರಣ ಶಾಲೆಗಳಿಗೆ ರಜೆ ಘೋಷಣೆ ಈ ಮಳೆಗಾಲದಲ್ಲಿ ಹೆಚ್ಚುತ್ತಿದೆ!
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ
ರಾಜಸ್ಥಾನ: ಪ್ರಾರ್ಥನೆ ವೇಳೆ ಶಾಲೆಯ ಮೇಲ್ಛಾವಣಿ ಕುಸಿತ
ಡೆಲಿವರಿ ಬಾಯ್ ಬಟ್ಟೆ ತೊಟ್ಟು ಆಭರಣದ ಅಂಗಡಿ ದರೋಡೆ
ಡೆಲಿವರಿ ಬಾಯ್ ಬಟ್ಟೆ ತೊಟ್ಟು ಆಭರಣದ ಅಂಗಡಿ ದರೋಡೆ
Video: ಮಹಾರಾಷ್ಟ್ರ: ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿತ
Video: ಮಹಾರಾಷ್ಟ್ರ: ಶತಮಾನಗಳಷ್ಟು ಹಳೆಯದಾದ ಕೋಟೆ ಕುಸಿತ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ವ್ಯಕ್ತಿಯಿಂದ ಏಕಾಏಕಿ ಹಲ್ಲೆ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್