Spandana Funeral Video: ಹರಿಶ್ಚಂದ್ರ ಘಾಟ್​ನ ರುದ್ರಭೂಮಿಯಲ್ಲಿ ಸ್ಪಂದನಾ ವಿಜಯ್ ಮೃತದೇಹ ಅಂತ್ಯ ಸಂಸ್ಕಾರ​

| Updated By: ಮಂಜುನಾಥ ಸಿ.

Updated on: Aug 11, 2023 | 9:59 PM

Spandana Vijay Cremation Live Streaming: ವಿಜಯ್ ರಾಘವೇಂದ್ರ ಅವರ ಮುದ್ದಿನ ಪತ್ನಿ ಸ್ಪಂದನಾ ವಿಜಯ್​ ಇಹಲೋಕ ಯಾತ್ರೆ ತ್ಯಜಿಸಿದ್ದಾರೆ. ಸ್ಪಂದನಾ ಅವರ ಪಾರ್ಥಿವ ಶರೀರವನ್ನು ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ​ ಸಕಲ ವಿಧಿವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಯಿತು. ಪತಿ ವಿಜಯ್​ ರಾಘವೇಂದ್ರ, ಮಗ ಶೌರ್ಯ, ತಂದೆ ಬಿಕೆ ಶಿವರಾಂ, ಮಾವ ಎಸ್​ಎ ಚಿನ್ನೇಗೌಡ, ಮೈದುನ ಶ್ರೀಮುರಳಿ, ನಟ ಶಿವಾರಜ್​ಕುಮಾರ್​ ಹಾಗೂ ಕುಟುಂಬದವರು, ಆಪ್ತರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ದು:ಖದ ಮಡುವಿನಲ್ಲೇ ಸ್ಪಂದನಾ ಅವರ ಮೃತದೇಹವನ್ನು ಹರಿಶ್ಚಂದ್ರ ಘಾಟ್​ನ ರುದ್ರಭೂಮಿಯ ವಿದ್ಯುತ್​ ಚಿತಾಗಾರದಲ್ಲಿ ದೇಹದಹನ ಮಾಡಲಾಯಿತು.

Spandana Vijay Cremation Live Streaming: ಸ್ಪಂದನಾ ವಿಜಯ್ ರಾಘವೇಂದ್ರ ಅವರ ಅಂತಿಮ ದರ್ಶನಕ್ಕೆ ಅವರ ತಂದೆ ಬಿಕೆ ಶಿವರಾಂ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಟ ರಾಘವೇಂದ್ರ ರಾಜ್​ಕುಮಾರ್, ಯಶ್, ಧ್ರುವ ಸರ್ಜಾ, ಕೋಮಲ್ ಸೇರಿ ಅನೇಕರು ಸ್ಪಂದನಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಟ ಶಿವರಾಜ್​ಕುಮಾರ್​, ಶ್ರೀಮುರಳಿ, ವಿಜಯ್ ರಾಘವೇಂದ್ರ, ಮಗ ಶೌರ್ಯ ಸ್ಪಂದನಾ ಅವರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು. ಇದೀಗ ಸ್ಪಂದನಾ ಅವರ ಮೃತದೇಹವನ್ನು ಶ್ರೀರಾಂಪುರದ ಹರಿಶ್ಚಂದ್ರ ಘಾಟ್​ನ ರುದ್ರಭೂಮಿಯ ವಿದ್ಯುತ್​ ಚಿತಾಗಾರದಲ್ಲಿ ದೇಹದಹನ ಮಾಡಲಾಯಿತು.

Published on: Aug 09, 2023 07:19 AM