‘ವಿಜಯಾನಂದ’ ಸಿನಿಮಾ ಟ್ರೇಲರ್ ಲಾಂಚ್ ವೇಳೆ ಸಿಬ್ಬಂದಿ ವರ್ಗಕ್ಕೆ ಧನ್ಯವಾದ ಹೇಳಿದ ವಿಜಯ ಸಂಕೇಶ್ವರ

| Updated By: ರಾಜೇಶ್ ದುಗ್ಗುಮನೆ

Updated on: Nov 20, 2022 | 6:30 AM

ಉದ್ಯಮಿ ವಿಜಯ ಸಂಕೇಶ್ವರ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಇಷ್ಟು ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಲು ಕಾರಣವಾದ ಸಿಬ್ಬಂದಿ ವರ್ಗಕ್ಕೆ ಅವರು ಧನ್ಯವಾದ ಹೇಳಿದ್ದಾರೆ.

ವಿಜಯ ಸಂಕೇಶ್ವರ (Vijay Sankeshwar) ಅವರ ಜೀವನ ಆಧರಿಸಿ ‘ವಿಜಯಾನಂದ’ (Vijayanand) ಸಿನಿಮಾ ಮೂಡಿ ಬರುತ್ತಿದೆ. ರಿಷಿಕಾ ಶರ್ಮಾ ಅವರು ಈ ಬಯೋಪಿಕ್​ ಅನ್ನು ನಿರ್ದೇಶನ ಮಾಡಿದ್ದಾರೆ. ನಟ ನಿಹಾಲ್ ಅವರು ವಿಜಯ ಸಂಕೇಶ್ವರ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟ್ರೇಲರ್ ಲಾಂಚ್ ವೇಳೆ ಉದ್ಯಮಿ ವಿಜಯ ಸಂಕೇಶ್ವರ ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ಇಷ್ಟು ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಲು ಕಾರಣವಾದ ಸಿಬ್ಬಂದಿ ವರ್ಗಕ್ಕೆ ಅವರು ಧನ್ಯವಾದ ಹೇಳಿದ್ದಾರೆ.