ವಿಜಯದಶಮಿ: ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ
ವಿಜಯದಶಮಿಯ ಶುಭದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ನಸುಕಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರಅಭ್ಯಾಸ ಪ್ರಾರಂಭವಾಯಿತು.
ಇಂದು ವಿಜಯದಶಮಿ ಶ್ರೇಷ್ಠವಾದ ದಿನ. ಈ ದಿನ ಯಾವುದೇ ಶುಭಕಾರ್ಯಗಳನ್ನು ಕೈಗೊಂಡರೆ ನಿರ್ವಿಘ್ನವಾಗಿ ನಡೆಯುತ್ತವೆ. ಈ ಶುಭದಿನದಂದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ನಸುಕಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಕ್ಷರಅಭ್ಯಾಸ ಪ್ರಾರಂಭವಾಯಿತು. ವೈದಿಕರ ಮಾರ್ಗದರ್ಶನ ಮೇರೆಗೆ ಪೋಷಕರು ಮಕ್ಕಳ ಕೈಹಿಡಿದು ಅಕ್ಕಿಯಲ್ಲಿ ಓಂಕಾರ ಬರೆಯುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಬಳಿಕ ಪೋಷಕರು ಉಂಗುರದ ಮೂಲಕ ಮಕ್ಕಳ ನಾಲಿಗೆಯ ಮೇಲೆ ಓಂಕಾರ ಬರೆದರು.
ಕೊಲ್ಲುರು ಮುಕಾಂಬಿಕಾ ಸನ್ನಿಧಿ ಬಹಳ ಪವಿತ್ರ ಮತ್ತು ಶಕ್ತಿ ಪೀಠವಾಗಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ ಲಕ್ಷ್ಮಿ, ಸರಸ್ವತಿ ಮತ್ತು ಪಾರ್ವತಿಯ ಸಂಗಮ ಸ್ಥಳವಾಗಿದೆ. ಇಲ್ಲಿ ಅಕ್ಷರಾಭ್ಯಾಸ ಮಾಡಿಸಲು ರಾಜ್ಯ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ