Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಾಯ ಕೋರಿ ಮನೆಯ ಬಳಿ ಬಂದ ಮಹಿಳೆಗೆ ನೆರವಾದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ಸಹಾಯ ಕೋರಿ ಮನೆಯ ಬಳಿ ಬಂದ ಮಹಿಳೆಗೆ ನೆರವಾದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 12, 2024 | 1:55 PM

ಆಯುಧ ಪೂಜೆ ಮತ್ತು ವಿಜಯದಶಮಿ ನಿಮಿತ್ತ ಸಚಿವ ಕುಮಾರಸ್ವಾಮಿ ಬೆಂಗಳೂರಿಗೆ ಆಗಮಿಸಿರಬಹುದು ಅದರೆ ಸೋಜಿಗದ ಸಂಗತಿಯೆಂದರೆ ಅವರು ಕೇಂದ್ರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರೂ ಹೆಚ್ಚಿನ ಸಮಯವನ್ನು ಕರ್ನಾಟಕದಲ್ಲಿ ಕಳೆಯುತ್ತಾರೆ. ಕಾಂಗ್ರೆಸ್ ನಾಯಕರು ಹಲವಾರು ಬಾರಿ ಈ ಕುರಿತು ತಕರಾರು ಎತ್ತಿದ್ದಾರೆ.

ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಂಸತ್ತ್ತಿಗೆ ಅಯ್ಕೆಯಾಗಿ ಕೇಂದ್ರದಲ್ಲಿ ಮಂತ್ರಿಯಾದರೂ ರಾಜ್ಯದಲ್ಲಿ ಮೊದಲಿನಷ್ಟೇ ಜನಪ್ರಿಯ ನಾಯಕ. ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾ ಸಹಾಯ ಕೋರಿ ಈಗಲೂ ಜನ ಅವರಲ್ಲಿಗೆ ಬರುತ್ತಾರೆ. ಇಲ್ಲೊಬ್ಬ ಮಹಿಳೆ ತಾವು ಅನುಭವಿಸುತ್ತಿರುವ ತೊಂದರೆಯನ್ನು ಹೇಳಿಕೊಳ್ಳಲು ಹೋದಾಗ ಕುಮಾರಸ್ವಾಮಿ ಮೊದಲಿಗೆ ಅಸಹಾಯಕತೆ ಪ್ರದರ್ಶಿಸಿದರೂ ನಂತರ ತಮ್ಮ ಆಪ್ತ ಕಾರ್ಯದರ್ಶಿಗೆ ಸಮಸ್ಯೆಯನ್ನು ಬಗೆಹರಿಸುವಂತೆ ಸೂಚನೆ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆದರಿಕೆ ಆರೋಪ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದ ಎಡಿಜಿಪಿ ಚಂದ್ರಶೇಖರ್​