Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysuru Dasara Mahotsav-2024: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಕುಟುಂಬ

Mysuru Dasara Mahotsav-2024: ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ ಕುಟುಂಬ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 12, 2024 | 12:22 PM

Mysuru Dasara Mahotsav-2024: ಈಗಾಗಲೇ ವರದಿ ಮಾಡಿರುವಂತೆ ಇಂದು ಮಧ್ಯಾಹ್ನ ಜಂಬೂ ಸವಾರಿ ಆರಂಭಗೊಂಡು ಸಾಯಂಕಾಲ ಕೊನೆಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ಸಂಗತಿಯನ್ನು ಶುಕ್ರವಾರದಂದು ಮಾಧ್ಯಮದವರಿಗೆ ತಿಳಿಸಿದ್ದರು.

ಮೈಸೂರು: ನವರಾತ್ರಿಯ ಕೊನೆಯ ದಿನವಾಗಿರುವ ಇಂದು ನಾಡದೇವತೆ ಮತ್ತು ಉತ್ಸವ ಮೂರ್ತಿ ಚಾಮುಂಡೇಶ್ವರಿಗೆ ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಪೂಜೆ ಸಲ್ಲಿಸಿತು. ಸಿದ್ದಾರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅವರು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮುಖ್ಯಮಂತ್ರಿಯವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಸ್ಥಳದವರೆಗೆ ಬಂದಿದ್ದಾರಾದರೂ ಕಾರಲ್ಲೇ ಕುಳಿತು ದೇವಿಯ ದರ್ಶನ ಪಡೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗಜಪಡೆಯ ಆಗಮನದೊಂದಿಗೆ ಮೈಸೂರಲ್ಲಿ ಶುರುವಾದ ದಸರಾ ಮಹೋತ್ಸವ-2024 ಕಲರವ