ಭೀಮಾತೀರದ ರೌಡಿಗಳ ಪರೇಡ್ ನಡೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಗ್ರಹಾಚಾರ ನೆಟ್ಟಗಿರದು ಅಂತ ಎಚ್ಚರಿಸಿದರು ವಿಜಯಪುರ ಎಸ್ ಪಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 17, 2022 | 5:10 PM

ಮತ್ತೊಮ್ಮೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಗ್ರಹಾಚಾರ ನೆಟ್ಟಗಿರುವುದಿಲ್ಲ ಎಂದು ಎರಡೆರಡು ಬಾರಿ ಎಚ್ಚರಿಸಿದರು. ಗಡಿಪಾರು ಮಾಡಲು ಸಹ ತಾವು ಹಿಂತೆಗೆಯುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.

Vijayapura: ಭೀಮಾತೀರದ ರೌಡಿಗಳು (Bhima Riverbank rowdies) ನೊಟೋರಿಯಸ್ ಮಾರಾಯ್ರೇ. ಉತ್ತರ ಕರ್ನಾಟಕದ ಪೊಲೀಸರಿಗೆ ನಿರಂತವಾಗಿ ಸವಾಲಾಗಿರುವ, ತಲೆನೋವಾಗಿರುವ ರೌಡಿಗಳು ಅವರು. ಶುಕ್ರವಾರದಂದು ವಿಜಯಪುರ ಜಿಲ್ಲೆ ಪೊಲೀಸ್ ವರಷ್ಠಾಧಿಕಾರಿ ಆನಂದಕುಮಾರ (SP Anand Kumar) ಅವರು ಆಲಮೇಲ (Almail) ಪಟ್ಟಣ ಪೊಲೀಸ್ ಠಾಣಾ ಆವರಣದಲ್ಲಿ ರೌಡಿಗಳ ಪರೇಡ್ ನಡೆಸಿ ಉತ್ತಮ ನಾಗರಿಕರಾಗಿ ಬಾಳುವಂತೆ ತಾಕೀತು ಮಾಡಿದರು. ಮತ್ತೊಮ್ಮೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದರೆ ಗ್ರಹಾಚಾರ ನೆಟ್ಟಗಿರುವುದಿಲ್ಲ ಎಂದು ಎರಡೆರಡು ಬಾರಿ ಎಚ್ಚರಿಸಿದರು. ಗಡಿಪಾರು ಮಾಡಲು ಸಹ ತಾವು ಹಿಂತೆಗೆಯುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ                        ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.