ಧಾರವಾಡ: ಭಾರಿ ಮಳೆಯಿಂದ ನಡುಗಡ್ಡೆಯಂತಾದ ಶಾಲೆಯಲ್ಲಿ ವಿದ್ಯಾರ್ಥಿಗಳು ಎರಡು ಗಂಟೆಗಿಂತ ಹೆಚ್ಚಿನ ಸಮಯ ಸಿಲುಕಿದ್ದರು
ಸುಮಾರು ಎರಡು ತಾಸುಗಳಿಗಿಂತ ಹೆಚ್ಚು ಸಮಯ ಹಸಿದ ಮಕ್ಕಳು ಭಯ ಮತ್ತು ಆತಂಕದಿಂದ ಶಾಲೆಯಲ್ಲೇ ಉಳಿಯುವ ಪರಿಸ್ಥಿತಿ ಉಂಟಾಗಿದೆ. ಅಂತಿಮವಾಗಿ ಪಾಲಕರು ಮತ್ತು ಊರವರು ಸೇರಿ ಮಕ್ಕಳನ್ನು ಟ್ರ್ಯಾಕ್ಟರ್ ಒಂದನ್ನು ಬಳಿಸಿ ಸುರಕ್ಷಿತವಾಗಿ ಆಚೆ ಕರೆತಂದಿದ್ದಾರೆ.
Dharwad: ಮಳೆಗಾಲ ಶುರುವಾಗಿದೆ ಮತ್ತು ಮಳೆ ಸೃಷ್ಟಿಸುತ್ತಿರುವ ಅವಾಂತರಗಳೂ ಹೆಚ್ಚುತ್ತಿವೆ. ಧಾರವಾಡದ (Dharwad) ನವಲಗುಂದ ತಾಲ್ಲೂಕಿನ ಅಮರಗೋಳ ಸರ್ಕಾರೀ ಪ್ರೌಢಶಾಲೆಯನ್ನು (government high school) ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿದೆ. ಗುರುವಾರ ಮಧ್ಯಾಹ್ನ ಈ ಭಾಗದಲ್ಲಿ ಧಾರಾಕಾರವಾಗಿ ಮಳೆ (heavy rains) ಸುರಿದ ಕಾರಣ ಸುತ್ತಮುತ್ತಲಿನ ಹಳ್ಳಕೊಳ್ಳಗಳೆಲ್ಲ ಉಕ್ಕಿ ಹರಿಯಲಾರಂಭಿಸಿದ ಮೇಲೆ ಶಾಲೆ ಮತ್ತು ಅದರ ಆವರಣ ನಡುಗಡ್ಡೆಯಾಗಿ ಮಾರ್ಪಟ್ಟು ಸುಮಾರು 130 ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಊರಿನಿಂದ ಪ್ರತ್ಯೇಕಸಲ್ಪಿಟ್ಟಿದ್ದಾರೆ. ಸುಮಾರು ಎರಡು ತಾಸುಗಳಿಗಿಂತ ಹೆಚ್ಚು ಸಮಯ ಹಸಿದ ಮಕ್ಕಳು ಭಯ ಮತ್ತು ಆತಂಕದಿಂದ ಶಾಲೆಯಲ್ಲೇ ಉಳಿಯುವ ಪರಿಸ್ಥಿತಿ ಉಂಟಾಗಿದೆ. ಅಂತಿಮವಾಗಿ ಪಾಲಕರು ಮತ್ತು ಊರವರು ಸೇರಿ ಮಕ್ಕಳನ್ನು ಟ್ರ್ಯಾಕ್ಟರ್ ಒಂದನ್ನು ಬಳಿಸಿ ಸುರಕ್ಷಿತವಾಗಿ ಆಚೆ ಕರೆತಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.