ಪ್ರತಿಭಟನೆಯ ಭಾಗವಾಗಿ ದೇವನಹಳ್ಳಿ ರೈತರು ಪಂಜಿನ ಮೆರವಣಿಗೆಯನ್ನೂ ನಡೆಸಿದರು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣವಾಗಿರುವ ದೇವನಹಳ್ಳಿಯಲ್ಲಿ ರೈತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಐಬಿ ಸರ್ಕಲ್ ನಿಂದ ಶುರುಮಾಡಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
Devanahalli: ಪೊಲೀಸರ ವಿರೋಧದ ನಡುವೆಯೂ ದೇವನಹಳ್ಳಿ ಭಾಗದ ರೈತರು ಶುಕ್ರವಾರ ಬೆಳಗಿನ ಜಾವ ಪಂಜಿನ ಮೆರವಣಿಗೆ (Torchlight Protest) ನಡೆಸಿದರು. ಅವರು ಬೇಡಿಕೆ ಸರಳವಾಗಿದೆ, ಕೆಐಎಡಿಬಿ (KIADB) ಈ ಭಾಗದಲ್ಲಿ ಕೈಗಾರಿಕೆಗಳನ್ನು ನಿರ್ಮಿಸಲು ರೈತರ ಜಮೀನುಗಳನ್ನು ಸ್ವಾಧೀನ (acquire) ಮಾಡಿಕೊಳ್ಳುತ್ತಿದೆ. ರೈತರು ಅಳಲು ಮತ್ತು ಬೇಡಿಕೆ ಏನೆಂದರೆ, ಕೆಐಎಡಿಬಿ ತಾನು ಸ್ವಾಧೀನಪಡಿಸಿಕೊಳ್ಳುತ್ತಿರುವ ಪಲವತ್ತಾದ ಜಮೀನುಗಳಿಗೆ ಮಾರುಕಟ್ಟೆ ಬೆಲೆ ನೀಡುತ್ತಿಲ್ಲ. ಅದನ್ನು ನೀಡಬೇಕೆಂದು ಆಗ್ರಹಿಸಿ ಅವರು ಬೆಳಗಿನ ಜಾವದಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಟ್ಟಣವಾಗಿರುವ ದೇವನಹಳ್ಳಿಯಲ್ಲಿ ರೈತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಐಬಿ ಸರ್ಕಲ್ ನಿಂದ ಶುರುಮಾಡಿ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos