ದೇವನಹಳ್ಳಿಯಲ್ಲಿ ರೈತರು ತಾವು ಬೆಳೆದ ಹೂವನ್ನು ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದರು
ಹಲವಾರು ರೈತರು ತಮ್ಮ ತೋಟಗಳಲ್ಲಿ ಬೆಳೆದ ಹೂಗಳನ್ನು ಚೆಲ್ಲುತ್ತಿರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಇದಾದ ನಂತರವೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ಶುರುವಾಗುತ್ತದೆ.
ದೇವನಹಳ್ಳಿಯಲ್ಲಿ ರೈತರು ಅದರಲ್ಲೂ ವಿಶೇಷವಾಗಿ ಹೂ ಬೆಳೆಗಾರರು ಶುಕ್ರವಾರ ಬೆಳಗ್ಗೆ ಕೆಐಎಡಿಬಿ (KIADB) ತಮ್ಮ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಅದಕ್ಕೆ ಮಾರುಕಟ್ಟೆ ಬೆಲೆಯನ್ನು ನೀಡದಿರುವುದರ ವಿರುದ್ಧ ಪ್ರತಿಭಟನೆ (protest) ನಡೆಸುತ್ತಿರುವುದನ್ನು ಈಗಾಗಲೇ ಚರ್ಚೆ ಮಾಡಿದ್ದೇವೆ. ಪ್ರತಿಭಟನೆ ಸಂದರ್ಭದಲ್ಲಿ ಹೂ ಬೆಳೆಗಾರರು (flower growers) ರಸ್ತೆಗೆ ಹೂಗಳನ್ನು ಚೆಲ್ಲಿದ್ದನ್ನು ನಿಮಗೆ ನಾವು ತೋರಿಸಿರಲಿಲ್ಲ. ಈ ವಿಡಿಯೋ ನಮಗೆ ಈಗ ಸಿಕ್ಕಿದೆ. ಹಲವಾರು ರೈತರು ತಮ್ಮ ತೋಟಗಳಲ್ಲಿ ಬೆಳೆದ ಹೂಗಳನ್ನು ಚೆಲ್ಲುತ್ತಿರುವುದನ್ನು ನೀವು ವಿಡಿಯೋನಲ್ಲಿ ನೋಡಬಹುದು. ಇದಾದ ನಂತರವೆ ರೈತರು ಮತ್ತು ಪೊಲೀಸರ ನಡುವೆ ವಾಗ್ವಾದ ಶುರುವಾಗುತ್ತದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos