ನನ್ನನ್ನು ಸೋಲಿಸಲು ನಿರಾಣಿ ಕಳಿಸುವ ದುಡ್ಡು ತೆಗೆದುಕೊಂಡು ವಿಜಯಪುರದ ಮತದಾರ ನನಗೆ ವೋಟು ಹಾಕುತ್ತಾನೆ: ಬಸನಗೌಡ ಯತ್ನಾಳ್

Edited By:

Updated on: Jan 07, 2023 | 2:21 PM

ತಮ್ಮನ್ನು ಸೋಲಿಸಲು ನಿರಾಣಿ, ಬಿವೈ ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ದುಡ್ಡು ಕಳಿಸಲಿದ್ದು ವಿಜಯಪುರದ ಜನ ಅವರಿಂದ ಹಣ ಪಡೆದು ತಮಗೆ ವೋಟು ಹಾಕುವುದು ನಿಶ್ಚಿತ ಎಂದು ಯತ್ನಾಳ್ ಹೇಳಿದರು.

ವಿಜಯಪುರ: ರಾಜ್ಯ ಬಿಜೆಪಿಯ ಪ್ರಮುಖ ನಾಯಕರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಮುರುಗೇಶ್ ನಿರಾಣಿ ನಡುವೆ ಪೂರ್ಣಪ್ರಮಾಣ ಯುದ್ಧ ಘೋಷಣೆ ಆದಂತಿದೆ, ಯಾಕೆ ಅಂತ ಗೊತ್ತಿಲ್ಲ. ಯತ್ನಾಳ್ ತಮ್ಮ ಪಕ್ಷದವರ ವಿರುದ್ಧವೂ ಹರಿಹಾಯುವುದು ಗೊತ್ತಿರುವ ಸಂಗತಿ. ನಿರಾಣಿ ಸಿಡಿ ರಿಲೀಸ್ ಮಾಡುವುದಾಗಿ ಹೆದರಿಸಿದ್ದು ಯತ್ನಾಳ್ ರನ್ನು ಕೆರಳಿಸಿದೆ. ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತಾಡುವಾಗ ನಿರಾಣಿ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಯತ್ನಾಳ್, ನಿರಾಣಿ ನಿಜಕ್ಕೂ ಅವರಪ್ಪನಿಗೆ ಹುಟ್ಟಿದ್ದರೆ ಸಿಡಿ ಬಿಡುಗಡೆ ಮಾಡಲಿ ಅಂತ ಸವಾಲು ಹಾಕಿದರು. ತಮ್ಮನ್ನು ಸೋಲಿಸಲು ನಿರಾಣಿ, ಬಿವೈ ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ದುಡ್ಡು ಕಳಿಸಲಿದ್ದು ವಿಜಯಪುರದ ಜನ ಅವರಿಂದ ಹಣ ಪಡೆದು ತಮಗೆ ವೋಟು ಹಾಕುವುದು ನಿಶ್ಚಿತ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ