ನಿರೀಕ್ಷೆಗೂ ಮೀರಿ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ಜನ: ಅಡುಗೆ ಮಾಡಿ ಸುಸ್ತಾದ ಬಾಣಸಿಗರು
ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದರಿಂದ ಬಾಣಸಿಗರು ಮತ್ತೆ ಊಟದ ತಯಾರಿ ಮಾಡಿ ಸುಸ್ತಾದರು.
ಹಾವೇರಿ: ಜಿಲ್ಲೆಯಲ್ಲಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನ (Sahitya Sammelana) ನಿನ್ನೆಯಿಂದ(ಜ. 6) ಆರಂಭವಾಗಿದ್ದು, ನಿರೀಕ್ಷೆಗೂ ಮೀರಿ ಜನರು ಆಗಮಿಸುತ್ತಿದ್ದಾರೆ. ಇಂದು ಮಧ್ಯಾಹ್ನ 70 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಒಂದೂವರೆ ಲಕ್ಷಕ್ಕೂ ಅಧಿಕ ಜನರು ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ್ದಾರೆ. ಇದರಿಂದ ಬಾಣಸಿಗರು ಮತ್ತೆ ಊಟದ ತಯಾರಿ ಮಾಡಿದರು. ನಿರೀಕ್ಷೆಗೂ ಮಿರಿ ಜನಸಾಗರ ಬಂದಿರುವ ಹಿನ್ನೆಲೆ ಬಾಣಸಿಗರಿಂದ ಊಟ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ವೇಳೆ ಸ್ವತಃ ಪೊಲೀಸರೇ ಊಟ ನೀಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 07, 2023 08:23 PM
Latest Videos