ಸಾತ್ವಿಕ್ ಬದುಕಿ ಬರಲೆಂದು ಹರಕೆ ಕಟ್ಟಿದ್ದ ಯುವಕರು: ರಸ್ತೆಯೂದ್ದಕ್ಕೂ ದೀರ್ಘದಂಡ ನಮಸ್ಕಾರ

Edited By:

Updated on: Apr 05, 2024 | 5:28 PM

ಸಾತ್ವಿಕ ಬದುಕಿ ಬರಲಿ ಎಂದು ಸಾಕಷ್ಟು ಜನರು ದೇವರಿಗೆ ಪಾರ್ಥನೆ ಸಲ್ಲಿಸಿದ್ದರು. ಅದೇ ರೀತಿಯಾಗಿ ಮೃತ್ಯು ಕೂಪದಿಂದ ಸಾತ್ವಿಕ್ ಪಾರಾಗಲಿ ಎಂದು ಇಂಡಿ ತಾಲೂಕಿನ ಐರಸಂಗ ಗ್ರಾಮದ ಯುವಕರಾದ ಮಹೇಶ್ ಹಾಗೂ ಅಶೋಕ್​ ಹರಕೆ ಕಟ್ಟಿದ್ದರು. ಸಾತ್ವಿಕ ಜೀವಂತವಾಗಿ ಬದುಕಿ ಬಂದ ಬಳಿಕ ಇದೀಗ ಯುವಕರು ಹರಕೆ ತೀರಿಸಿದ್ದಾರೆ.

ವಿಜಯಪುರ, ಏಪ್ರಿಲ್​ 05: ಕಳೆದ ಏಪ್ರಿಲ್​ 3ರ ಸಾಯಂಕಾಲ ಜಮೀನಿನಲ್ಲಿರುವ ತೆರೆದ ಕೊಳವೆ ಬಾವಿಯಲ್ಲಿ (Borewell) ಜಾರಿ ಬಿದ್ದಿದ್ದ ಪುಟ್ಟ ಬಾಲಕ ಸಾತ್ವಿಕ್ 20 ಗಂಟೆಗಳ ಕಾಲ ತಲೆ ಕೆಳಗಾವಿ ಬಿದ್ದು ಪವಾಡ ಸದೃಶ್ಯವಾಗಿ ಜೀವಂತವಾಗಿ ಬಂದದ್ದು ವಿಸ್ಮಯ ಎಂದೇ ಹೇಳಬಹುದು. ಸಾತ್ವಿಕ ಬದುಕಿ ಬರಲಿ ಎಂದು ಸಾಕಷ್ಟು ಜನರು ದೇವರಿಗೆ ಪಾರ್ಥನೆ ಸಲ್ಲಿಸಿದ್ದರು. ಅದೇ ರೀತಿಯಾಗಿ ಮೃತ್ಯು ಕೂಪದಿಂದ ಸಾತ್ವಿಕ್ ಪಾರಾಗಲಿ ಎಂದು ಇಂಡಿ ತಾಲೂಕಿನ ಐರಸಂಗ ಗ್ರಾಮದ ಯುವಕರಾದ ಮಹೇಶ್ ಹಾಗೂ ಅಶೋಕ್​ ಹರಕೆ ಕಟ್ಟಿದ್ದರು. ಸಾತ್ವಿಕ ಜೀವಂತವಾಗಿ ಬದುಕಿ ಬಂದ ಬಳಿಕ ಇದೀಗ ಯುವಕರು ಐರಸಂಗ ಗ್ರಾಮದಿಂದ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಮಠದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More