ಗದಗ ಜಿಲ್ಲೆ ಪ್ರವಾಸದಲ್ಲಿರುವ ವಿಜಯೇಂದ್ರ ಮಹಿಳಾ ಅಭಿಮಾನಿಯೊಂದಿಗೆ ಫೋಟೋ ತೆಗೆಸಿಕೊಂಡರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 22, 2022 | 1:43 PM

ಆದರೆ ಅದು ಕ್ಲಿಕ್ಕಾಗದಾಗ ಒಬ್ಬ ಕಾರ್ಯಕರ್ತನಿಗೆ ಫೋನ್ ನೀಡಿ ಪೋಟೋ ತೆಗೆಯುವಂತೆ ಹೇಳುತ್ತಾರೆ. ಅಷ್ಟರೊಳಗೆ ಬೇರೆ ಜನ ಕೂಡ ಅವರ ಸುತ್ತ ನೆರೆಯುವುದರಿಂದ ಮಹಿಳೆ ಬಯಸಿದ್ದ ಸೆಲ್ಫೀ ಗ್ರೂಪ್ ಫೋಟೋದಲ್ಲಿ ಪರಿವರ್ತನೆಯಾಗುತ್ತದೆ.

ಗದಗ: ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಅವರ ಮಹಿಳಾ ಅಭಿಮಾನಿಗಳ ಸಂಖ್ಯೆ ಹೆಚ್ಚಿತ್ತಿರುವಂತಿದೆ ಮಾರಾಯ್ರೇ. ಸೋಮವಾರ ಗದಗ ಜಿಲ್ಲೆಯ ಪ್ರವಾಸದಲ್ಲಿದ್ದ ಅವರನ್ನು ಮಹಿಳಾ ಕಾರ್ಯಕರ್ತೆಯೊಬ್ಬರು ಸೆಲ್ಫೀಗಾಗಿ (Selfie) ಮನವಿ ಮಾಡಿದಾಗ ಕಾರಿನಿಂದ ಕೆಳಗಿಳಿದು ತಾವೇ ಫೋಟೋ ಕ್ಲಿಕ್ಕಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಅದು ಕ್ಲಿಕ್ಕಾಗದಾಗ ಒಬ್ಬ ಕಾರ್ಯಕರ್ತನಿಗೆ ಫೋನ್ ನೀಡಿ ಪೋಟೋ ತೆಗೆಯುವಂತೆ ಹೇಳುತ್ತಾರೆ. ಅಷ್ಟರೊಳಗೆ ಬೇರೆ ಜನ ಕೂಡ ಅವರ ಸುತ್ತ ನೆರೆಯುವುದರಿಂದ ಮಹಿಳೆ ಬಯಸಿದ್ದ ಸೆಲ್ಫೀ ಗ್ರೂಪ್ ಫೋಟೋದಲ್ಲಿ (group photo) ಪರಿವರ್ತನೆಯಾಗುತ್ತದೆ.