ಬಿಜೆಪಿಗೆ 160 ಸೀಟು ಸಿಗುತ್ತವೆ ಅಂತ ವಿಜಯೇಂದ್ರ ಬೋಗಸ್ ಸಮೀಕ್ಷೆ ಮಾಡಿಸಿದ್ದಾರೆ: ಬಸನಗೌಡ ಯತ್ನಾಳ್
ವಿಜಯೇಂದ್ರ ಅಪ್ಪ ರಾಜ್ಯ ಬಿಜೆಪಿಯ ಉಸ್ತುವಾರಿಯಲ್ಲಿದ್ದಾಗಲೇ 110 ಸೀಟು ಬರಲಿಲ್ಲ, ಇನ್ನು ಫೋರ್ಜರಿ ಮಾಡುವ ವಿಜಯೇಂದ್ರ ಮುಖ ನೋಡಿ ಯಾರಾದರೂ ವೋಟು ಹಾಕಿಯಾರೇ? ಬಿಜೆಪಿಯ ಕರ್ನಾಟಕ ಉಸ್ತುವಾರಿ ವರಿಷ್ಠರಿಗೆ ಒಂದು ವರದಿಯನ್ನು ಸಲ್ಲಿಸುತ್ತಾರಂತೆ, ಅವರು ಪಕ್ಷದ ಹಿತದೃಷ್ಟಿಯಿಂದ ನಿಷ್ಪಕ್ಷಪಾತವಾದ ವರದಿ ನೀಡಲಿ, ಇಲ್ಲದಿದ್ದರೆ ಬಿಜೆಪಿ ಹೀನಾಯವಾಗಿ ಸೋಲುತ್ತದೆ ಎಂದು ಯತ್ನಾಳ್ ಹೇಳಿದರು.
ವಿಜಯಪುರ, ಮೇ 27: ಬಿಜೆಪಿಗೆ ವಾಪಸ್ಸು ಕರೆಸಿಕೊಳ್ಳುವಂತೆ ತಾನ್ಯಾವತ್ತೂ ಹೈಕಮಾಂಡ್ಗೆ ಪತ್ರಬರೆಯಲ್ಲ, ಯಡಿಯೂರಪ್ಪ ಕುಟುಂಬದ (BS Yediyurappa family) ವಿರುದ್ಧ ಮಾತಾಡಿದ್ದು ತಪ್ಪು, ಅದಕ್ಕಾಗಿ ಕ್ಷಮೆ ಕೋರುತ್ತೇನೆ ಅಂತ ಯಾವತ್ತೂ ಹೇಳಿಲ್ಲ ಮುಂದೆಯೂ ಹೇಳಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ವಿಜಯೇಂದ್ರಗೆ ಕ್ರಿಮಿನಲ್ ಬುದ್ಧಿಯಿದೆ, ಮೊನೆ ಒಂದು ಸರ್ವೇ ಮಾಡಿಸಿದ್ದಾರೆ, ಈಗೇನಾದರೂ ವಿಧಾನಸಭೆಗೆ ಚುನಾವಣೆ ನಡೆದರೆ ಬಿಜೆಪಿ 160 ಸ್ಥಾನ ಸಿಗುತ್ತವಂತೆ, ದುಡ್ಡು ಕೊಟ್ಟು ಸರ್ವೇ ಮಾಡಿಸಿದರೆ ನಾವು ಹೇಳುವ ಅಂಕಿ ಅಂಶಗಳನ್ನೇ ವರದಿಯಲ್ಲಿ ನೀಡುತ್ತಾರೆ ಎಂದ ಯತ್ನಾಳ್, ತಾನೂ ಒಂದು ಸಮೀಕ್ಷೆ ಮಾಡಿಸಬಲ್ಲೆ, ಯತ್ನಾಳ್ ಇಲ್ಲದೆ ಬಿಜೆಪಿ ಚುನಾವಣೆಗೆ ಹೋದರೆ 30 ಸೀಟು ಕೂಡ ಬರಲಾರವು ಅಂತ ವರದಿ ನೀಡಲು ದುಡ್ಡು ಕೊಟ್ಟರೆ ಸಾಕು, ನಾವು ಹೇಳಿದಂತೆ ವರದಿ ಕೊಡುತ್ತಾರೆ ಅಂತ ಹೇಳಿದರು.
ಇದನ್ನೂ ಓದಿ: ದೇವರು ಈಶ್ವರಪ್ಪ ಮತ್ತು ನನಗೆ ಒಳ್ಳೆಯ ಸಂತಾನವನ್ನು ದಯಪಾಲಿಸಿದ್ದಾನೆ: ಬಸನಗೌಡ ಪಾಟೀಲ್ ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ