Puneeth Rajkumar: ನಮ್ಮ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು; ವಿಕ್ರಮ್ ರವಿಚಂದ್ರನ್ ಭಾವುಕ ಮಾತು
Vikram Ravichandran: ನಟ ರವಿಚಂದ್ರನ್ ಪುತ್ರ ವಿ್ಕರಮ್ ರವಿಚಂದ್ರನ್ ಕಂಠೀರವ ಸ್ಟುಡಿಯೋಗೆ ಆಗಮಿಸಿ, ಪುನೀತ್ ಸಮಾಧಿ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಈ ವೇಳೆ ಅವರು ಪುನೀತ್ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ನಟ ಪುನೀತ್ ರಾಜಕುಮಾರ್ ಸಮಾಧಿಗೆ ನಿತ್ಯವೂ ಅಭಿಮಾನಿಗಳು ಹಾಗೂ ಗಣ್ಯರು ಆಗಮಿಸಿ ದರ್ಶನ ಪಡೆದು ನಮಿಸುತ್ತಿದ್ದಾರೆ. ಇಂದು ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಪುನೀತ್ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದಾರೆ. ನಂತರ ಮಾತನಾಡಿದ ಅವರು, ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. ‘‘ಇನ್ನು ಆ ಶಾಕ್ ಇಂದ ಹೊರಗೆ ಬಂದೇ ಇಲ್ಲ. ಅವರ ಬ್ಲೆಸ್ಸಿಂಗ್ಸ್ ಯಾವತ್ತೂ ಇದೆ ನಮ್ಮ ಮೇಲೆ’’ ಎಂದು ನುಡಿದಿದ್ದಾರೆ. ಇದೇ ವೇಳೆ ಅವರು, ಪುನೀತ್ ತಮ್ಮ ಸಿನಿಮಾಗೆ ಹಾಡು ಹಾಡಬೇಕಿತ್ತು. ಅದರ ಮಾತುಕತೆ ಕೂಡ ಆಗಿತ್ತು ಎಂದು ನುಡಿದಿದ್ದಾರೆ. ‘‘ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು. ಆದರೆ ಈಗ ಅವರು ಇಲ್ಲ ಅಂದ್ರೆ ನಂಬೋಕೇ ಆಗುತ್ತಿಲ್ಲ. ಮಾತುಕತೆಯಾಗಿ 6 ತಿಂಗಳಾಗಿತ್ತು. ಲಾಸ್ಟ್ ಟೈಮ್ ಅದರ ಬಗ್ಗೆ ಮಾತನಾಡಬೇಕಿತ್ತು, ಆದರೆ ಆಗಲಿಲ್ಲ. ಶೀಘ್ರವೇ ಆ ಹಾಡು ರಿಲೀಸಾಗುತ್ತೆ. ಮೀಟ್ ಮಾಡಬೇಕಿತ್ತು, ತುಂಬಾ ವಿಚಾರ ಮಾತನಾಡಬೇಕಿತ್ತು. ಆದರೆ ಆಗಲಿಲ್ಲ, ಬೇಜಾರಾಗುತ್ತಿದೆ’’ ಎಂದು ವಿಕ್ರಮ್ ದುಃಖ ವ್ಯಕ್ತಪಡಿಸಿದ್ಧಾರೆ.
ಇಂದು ವೀಕೆಂಡ್ ಆಗಿರುವ ಕಾರಣ, ರಾಜ್ಯದ ವಿವಿಧ ಭಾಗದಿಂದ ಅಭಿಮಾನಿಗಳು ಪುನೀತ್ ದರ್ಶನಕ್ಕೆ ಆಗಮಿಸಿದ್ದಾರೆ. ಕಿಲೋ ಮೀಟರ್ಗಟ್ಟಲೆ ಉದ್ದದ ಕ್ಯೂ ಇದ್ದು, ಸರದಿ ಸಾಲಿನಲ್ಲಿ ಅಭಿಮಾನಿಗಳು ದರ್ಶನ ಪಡೆಯುತ್ತಿದ್ದಾರೆ. ಕಂಠೀರವ ಸ್ಟುಡಿಯೋ ಸುತ್ತಮುತ್ತ ಬಿಗಿ ಭದ್ರತೆಯನ್ನೂ ಏರ್ಪಡಿಸಲಾಗಿದ್ದು, ಸುಮಾರು 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:
Puneeth Rajkumar: ನಾಳೆ ಪುನೀತ್ 11ನೇ ದಿನದ ಕಾರ್ಯಕ್ರಮ; ಕುಟುಂಬದವರಿಂದ ಸಿದ್ಧತೆ
ಎಂದಿಗೂ ಮುಗಿಯದ ಪುನೀತ್ ರಾಜ್ಕುಮಾರ್ ನೆನಪು; ಇಲ್ಲಿವೆ ಅತಿ ಅಪರೂಪದ ಫೋಟೋಗಳು