Kichcha Sudeep: ವೈರಲ್​ ಆಯ್ತು ಕಿಚ್ಚ ಸುದೀಪ್​ ಹೊಸ ಹೇರ್​ಸ್ಟೈಲ್​

| Updated By: ರಾಜೇಶ್ ದುಗ್ಗುಮನೆ

Updated on: Aug 23, 2021 | 8:57 AM

‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್​ ರೋಣ’ ಸಿನಿಮಾ ಕೆಲಸಗಳಲ್ಲಿ ಸುದೀಪ್​ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ ಪೂರ್ಣಗೊಂಡಿವೆ. ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ.

ಕಿಚ್ಚ ಸುದೀಪ್​ ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ಸಿನಿಮೇತರ ವಿಚಾರಕ್ಕೂ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಈಗ ಸುದೀಪ್​ ಅವರು ಹೊಸ ಕೇಶ ವಿನ್ಯಾಸ ಮಾಡಿಸಿದ್ದಾರೆ. ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗಿದೆ.

‘ಕೋಟಿಗೊಬ್ಬ 3’ ಹಾಗೂ ‘ವಿಕ್ರಾಂತ್​ ರೋಣ’ ಸಿನಿಮಾ ಕೆಲಸಗಳಲ್ಲಿ ಸುದೀಪ್​ ಬ್ಯುಸಿ ಇದ್ದಾರೆ. ಎರಡೂ ಚಿತ್ರಗಳ ಬಹುತೇಕ ಪೂರ್ಣಗೊಂಡಿವೆ. ಕೊವಿಡ್​ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಎರಡೂ ಸಿನಿಮಾಗಳಿಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಅಂದಹಾಗೆ, ಹೊಸ ಹೇರ್​ಸ್ಟೈಲ್​ ಯಾವ ಚಿತ್ರಕ್ಕಾಗಿ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್​. ಧೋನಿ ಅವರು ಕೂಡ ತಮ್ಮ ಹೇರ್​ಸ್ಟೈಲ್​ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಆಗಿತ್ತು.

ಇದನ್ನೂ ಓದಿ: ರಾಜೀವ್ ಹೊಸ ಚಿತ್ರ ‘ಉಸಿರೇ ಉಸಿರೇ’ಗೆ  ಕಿಚ್ಚ ಸುದೀಪ್ ಸಿನಿಮಾ ಕನೆಕ್ಷನ್​

Follow us on